ತಿರುವನಂತಪುರಂ: ತಿಂಗಳ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲವು ಸೋಮವಾರ ತೆರೆಯಲಿದೆ. ಕಳೆದ ಬಾರಿಯಂತೆ ಈಗಲೂ ಸಮಸ್ಯೆ ಪರಿಸ್ಥಿತಿ ಉದ್ವಿಗ್ನಗೊಳ್ಳಬಾರದು ಅಂತಾ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಭಾರೀ ಭದ್ರತೆಗೆ ಮುಂದಾಗಿದ್ದಾರೆ.
ದೇವಸ್ಥಾನವು ಸೋಮವಾರ ತೆರೆಯಲಿದ್ದು, ತಿಂಗಳ ಪೂಜಾ ಕಾರ್ಯ ಆರಂಭಗೊಳ್ಳುತ್ತದೆ. ಬಳಿಕ ಮಂಗಳವಾರ ರಾತ್ರಿ ಮತ್ತೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಕಡಿಮೆ ಅವಧಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸಿಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಭದ್ರತೆ ಒದಗಿಸಿದ್ದಾರೆ.
Advertisement
Advertisement
ಶಬರಿಮಲೆ ಜಾಗರಣೆ ಸ್ಥಳದಲ್ಲಿ ಹಾಗೂ ಸಮೀಪದ ಸ್ಥಳಗಳಲ್ಲಿ 100 ಮಹಿಳಾ ಪೊಲೀಸ್ ಸೇರಿದಂತೆ 1,500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ 20 ಜನರ ಕಮಾಂಡೋ ತಂಡವನ್ನು ಸನ್ನಿಧಾನಂ, ನಿಲಕಲ್ ಮತ್ತು ಪಂಪಾ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ಮಂಗಳವಾರ ನಡೆಯಲಿದೆ. ಪೂಜೆಯ ವೇಳೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗುತ್ತದೆ. ನಂತರ ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
Advertisement
ಭಕ್ತಾಧಿಗಳನ್ನು ತಪಾಸಣೆ ಮಾಡಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದೇಗುಲದ ಬಳಿ ಭದ್ರತೆ ಒದಗಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪರವಾಣಿಗೆ ಪತ್ರ ಕಡ್ಡಾಯವಾಗಿದೆ.
ನಿಲಕಲ್ ಮತ್ತು ಪಂಪಾ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ಕೇರಳ ಸರ್ಕಾರ ನೀಡುವ ಟಿಕೆಟ್ ಕಡ್ಡಾಯಗೊಳಿಸಲಾಗಿದೆ. ಮಹಿಳೆಯರ ಪ್ರವೇಶವನ್ನು ವಿರೋಧ ಮತ್ತೆ ಪರಿಸ್ಥಿತಿ ಉದ್ವಿಗ್ನಕ್ಕೆ ಕಾರಣವಾಗವಾರದು ಅಂತಾ ಕೇರಳ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಇತ್ತ ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಅವರಿಗೆ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Around 1500 police personnel have been deployed from Pamba to Sannidhanam: IG Ashok Yadav to ANI on #SabarimalaTemple to open for a day tomorrow #Kerala pic.twitter.com/3bKEV8Tfm1
— ANI (@ANI) November 4, 2018