ತಿರುವನಂತಪುರಂ: ಕೇರಳ ರಾಜ್ಯ ಚೆಲ್ಲಿ ಸಾರಿಗೆ ಸಂಸ್ಥೆಯ ಉದ್ಯೋಗಿಗಳಿಗೆ 12 ಗಂಟೆಗಳ ಕರ್ತವ್ಯ ವ್ಯವಸ್ಥೆ ಜಾರಿಗೊಳಿಸಲು ಕೇರಳದ ಎಲ್‍ಡಿಎಫ್ (LDF) ಸರ್ಕಾರ ನಿರ್ಧರಿಸಿದೆ.
Advertisement
ಈಗಾಗಲೇ ಕೇರಳದಲ್ಲಿರುವ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಹಾಗಾಗಿ ನಷ್ಟದಲ್ಲಿ ಇರುವ ಸಾರಿಗೆ ಸಂಸ್ಥೆಯನ್ನು ಲಾಭದ ಹಳಿಗೆ ತರುವ ನಿಟ್ಟಿನಲ್ಲಿ ಈ ಕ್ರಮವೆಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ – ಅಲ್ ಖೈದಾದ ಇಬ್ಬರು ಉಗ್ರರು ಹತ್ಯೆ
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಬೆಂಬಲಿತ ಟ್ರಾನ್ಸ್‌ಪೋರ್ಟ್ ಡೆಮಾಕ್ರಾಟಿಕ್ ಫೆಡರೇಷನ್ (TDF) ಒಂದೇ ಹಂತದ ಕರ್ತವ್ಯದ ಅವಧಿಗೆ ಬೆಂಬಲ ಇದೆ, ಆದರೆ, 12 ಗಂಟೆಗಳ ಬದಲಾಗಿ 8 ಗಂಟೆ ಇರಲಿ ಎಂದಿದೆ. ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ವಾರದ 6 ದಿನ ಕರ್ತವ್ಯ ನಿರ್ವಹಿಸಲು ನೌಕರರಿಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ.
Advertisement
Advertisement
ಈಗಾಗಲೇ ಸಿಬ್ಬಂದಿ ಕೊರತೆಯಿಂದ ಡಿಪೋಗಳಲ್ಲಿ ನಿಂತಿರುವ 1,300 ಬಸ್‍ಗಳ ಸೇವೆಯನ್ನು ಮತ್ತೆ ಆರಂಭಿಸಲು ಸರ್ಕಾರ ಚಿಂತಿಸಿದ್ದು, 8 ಗಂಟೆಗಳ ಕರ್ತವ್ಯಕ್ಕೆ ಬದಲಾಗಿ ನಾಲ್ಕು ಗಂಟೆ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಬಸ್ ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ನಷ್ಟದಲ್ಲಿರುವ ಕೆಎಸ್‍ಆರ್‌ಟಿಸಿಗೆ (KSRTC) ಈಗಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ಹೆಚ್ಚಿನ ಆದಾಯ ಬರಲಿದೆ ಎಂಬುದು ಸರ್ಕಾರದ ನಂಬಿಕೆ. ಪ್ರಸ್ತುತ, ಕೆಎಸ್‍ಆರ್‌ಟಿಸಿ ಪ್ರತಿದಿನ ಸರಾಸರಿ 3,750 ಬಸ್‍ಗಳನ್ನು ಮಾತ್ರ ರೋಡಿಗಿಳಿಸುತ್ತಿದೆ. ಇದನ್ನೂ ಓದಿ: ದ್ವೇಷ ರಾಜಕಾರಣಕ್ಕೆ ತಂದೆಯನ್ನು ಕಳೆದುಕೊಂಡೆ; ದೇಶವನ್ನು ಕಳೆದುಕೊಳ್ಳಲು ಬಯಸಲ್ಲ – ರಾಹುಲ್ ಗಾಂಧಿ