ತಿರುವನಂತಪುರ: ಚರ್ಚ್ ಗೆ ಬೈಬಲ್ ಓದಲು ಬಂದಿದ್ದ ಅಪ್ರಾಪ್ತೆಯ ಮೇಲೆ ಪಾದ್ರಿ (ಫಾದರ್) ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೇರಳದ ಕಂದನಥಿಟ್ಟ ಪಟ್ಟಣದಲ್ಲಿರೋ ಸಿಎಸ್‍ಐ ಚರ್ಚ್ ನಲ್ಲಿ ನಡೆದಿದೆ.
65 ವರ್ಷದ ಫಾದರ್ ದೇವರಾಜ್ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ವ್ಯಕ್ತಿ. 16 ವರ್ಷದ ಬಾಲಕಿ ಚರ್ಚ್ ಗೆ ಬೈಬಲ್ ಓದಲು ಆಗಮಿಸಿದ್ದಳು. ಈ ವೇಳೆ ಚರ್ಚ್ ನಲ್ಲಿದ್ದ ಫಾದರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿಯ ಮೇಲಾಗುವ ದೌರ್ಜನ್ಯವನ್ನು ಆಕೆಯ ತಂದೆ ನೋಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿ ಫಾದರ್ ದೇವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ಸಂಜೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫಾದರ್ ದೇವರಾಜ್ ಕಳೆದ ಒಂದು ವರ್ಷದಿಂದ ಕಂದನಥಿಟ್ಟ ಚರ್ಚ್ ನಲ್ಲಿ ಧರ್ಮಗುರುವಾಗಿ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.