ತಿರುವನಂತಪುರಂ: ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಹೇಳಿಕೆ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ಅವರು, ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‍ನ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಈ ಪ್ರದೇಶದಲ್ಲಿ ಸೇವಾ ಭಾರತಿ ನೀರು ಸರಬರಾಜು ಮಾಡುತ್ತಿದೆ ಎಂದು ಜನವರಿ 22ರಂದು ಟ್ವೀಟ್ ಮಾಡಿದ್ದರು.
Advertisement
https://twitter.com/ShobhaBJP/status/1220006329768538112
Advertisement
ಈ ಟ್ವೀಟ್ ಆಧರಿಸಿ ಕೇರಳ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ ಆಧಾರದವಾಗಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Kerala police register case against BJP MP Shobha Karandlaje u/s 153(A) of IPC (promoting enmity between different groups on grounds of religion, race etc) for her tweet on 22 Jan, "Hindus of Kuttipuram Panchayat of Malappuram were denied water supply as they supported CAA 2019". pic.twitter.com/3r8F23pcXn
— ANI (@ANI) January 23, 2020