ತಿರುವನಂತಪುರಂ: ಚಲಿಸುತ್ತಿದ್ದ ಜೀಪ್‍ನಿಂದ ಕೆಳಗೆ ಬಿದ್ದ ಮಗುವೊಂದು ಪವಾಡ ರೀತಿ ಬದುಕುಳಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‍ನಲ್ಲಿ ನಡೆದಿದೆ.
ಮುನ್ನಾರ್ ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ರಸ್ತೆ ಮೇಲೆ ತೆರಳುತ್ತಿದ್ದ ಜೀಪ್‍ನಿಂದ ಏಕಾಏಕಿ ಒಂದು ವರ್ಷದ ಹೆಣ್ಣು ಮಗುವೊಂದು ಕೆಳಗೆ ಬಿದ್ದಿದೆ. ಆದರೆ ಪೋಷಕರು ಇದನ್ನು ಗಮನಿಸದೆ ಮುಂದೆ ಸಾಗಿದ್ದಾರೆ. ರಸ್ತೆಯ ಮೇಲೆ ಬಿದ್ದಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಬರಿಯಿಂದ ಅಂಬೆಗಾಲಿಡುತ್ತಾ ರಸ್ತೆ ಪಕ್ಕದಲ್ಲಿ ಬಂದು ಕುಳಿತಿತ್ತು.
Advertisement
ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಸಹಾಯದಿಂದ ಮಗು ಮತ್ತೆ ಪೋಷಕರ ಮಡಿಲು ಸೇರಿದೆ.
Advertisement
#WATCH Kerala: A one-year-old child falls out of a moving car in Munnar region of Idukki district. The girl child was later rescued and handed over to the parents. (08.09.2019) pic.twitter.com/tlI7DtsgxU
— ANI (@ANI) September 9, 2019
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಬ್ ಇನ್ಸ್‍ಸ್ಪೆಕ್ಟರ್ ಸಂತೋಷ್ ಕೆಎಂ ಅವರು, ಮಗು ಹಾಗೂ ಕುಟುಂಬಸ್ಥರು ತಮಿಳುನಾಡಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಕಲು ಹೋಗಿದ್ದರು. ಅಲ್ಲಿಂದ ಜೀಪ್‍ನಲ್ಲಿ ವಾಪಸ್ ಆಗುವಾಗ ಮಗು ಕಾಣಿಸಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಠಾಣೆಗೆ ಬಂದು ಮಗು ಕಾಣೆಯಾಗಿದೆ ಅಂತ ದೂರು ನೀಡಿದ್ದರು. ಅಷ್ಟೋತ್ತಿಗಾಗಲೇ ಮಗು ಬಿದ್ದಿದ್ದ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಅಳುತ್ತಿದ್ದ ಮಗುವನ್ನು ಕಂಡು ಮಾಹಿತಿ ನೀಡಿದ್ದರು. ಈ ಮೂಲಕ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ ಎಂದು ತಿಳಿಸಿದ್ದಾರೆ.
Advertisement
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಮಗು ರಸ್ತೆಯ ಮೇಲೆ ಬಿದ್ದು, ಅಂಬೆಗಾಲಿಡುತ್ತಾ ರಸ್ತೆ ದಾಟಿರುವುದು ಕಂಡು ಬಂದಿದೆ. ಅದೃಷ್ಟವಶಾತ್ ಚಲಿಸುತ್ತಿದ್ದ ಜೀಪ್‍ನಿಂದ ಮಗು ಬಿದ್ದಿದ್ದರೂ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ತಲೆ ಹಾಗೂ ದೇಹದ ಮೇಲೆ ಸಣ್ಣಪುಟ್ಟು ಗಾಯಗಳಾಗಿವೆ ಎಂದು ಸಂತೋಷ್ ಎಂಕೆ ಹೇಳಿದ್ದಾರೆ.