ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಯತ್ನಿಸುವ ಮೂಲಕ ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆ ತರಲು ಯತ್ನಿಸಿದ ರೆಹನಾ ಫಾತಿಮಾರನ್ನು ಕೇರಳ ಮುಸ್ಲಿಂ ಮಂಡಳಿ ಇಸ್ಲಾಂ ಧರ್ಮದಿಂದ ಉಚ್ಚಾಟಿಸಿದೆ.
ರೆಹನಾ ಫಾತಿಮಾ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶಕ್ಕೆ ಯತ್ನಿಸಿ, ಕೇರಳ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಈ ಬಗ್ಗೆ ಖುದ್ದು ಕೇರಳ ಮುಸ್ಲಿ ಜಮಾ-ಅಥ್ ಕೌನ್ಸಿಲ್ ಸಹ ರೆಹನಾ ವಿರುದ್ಧ ಕ್ರಮಕೈಗೊಳ್ಳುವ ತೀರ್ಮಾನ ಕೈಗೊಂಡಿತ್ತು.
Advertisement
ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ ಕೌನ್ಸಿಲ್ ಅಧ್ಯಕ್ಷ ಎ.ಪೂನ್ಕುಂಜು, ರೆಹನಾ ಫಾತಿಮಾ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರವೇಶಕ್ಕೆ ವಿರೋಧವಿದ್ದರೂ, ದೇವಾಲಯದ ಪ್ರವೇಶಕ್ಕೆ ಯತ್ನಿಸಿ ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆ ತರಲು ಯತ್ನಸಿದ್ದಾರೆ. ಹೀಗಾಗಿ ಆಕೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಇಸ್ಲಾಂ ಧರ್ಮದಿಂದ ಹೊರಹಾಕಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವೇಶಿಸಿದ್ರೆ ಶಬರಿಮಲೆ ಗರ್ಭಗುಡಿ ಬಂದ್: ಅರ್ಚಕರ ಪ್ರತಿಭಟನೆಗೆ ಮಣಿದು ಪ್ರವೇಶದಿಂದ ಹಿಂದಕ್ಕೆ ಸರಿದ ಮಹಿಳೆಯರು
Advertisement
Kerala: Journalist Kavitha Jakkal of Hyderabad based Mojo TV and woman activist Rehana Fatima are now returning from Sabarimala. Kerala IG says "We have told the female devotees about the situation, they will now be going back. So we are pulling pack. They have decided to return" pic.twitter.com/IO9TwcEj5V
— ANI (@ANI) October 19, 2018
Advertisement
ಶುಕ್ರವಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ವಿರೋಧ ನಡುವೆಯೂ, ಮಹಿಳಾ ಕಾರ್ಯಕರ್ತೆ ರೆಹನಾ ಫಾತಿಮಾ ಪೊಲೀಸರ ಬಿಗಿ-ಭದ್ರತೆಯೊಂದಿಗೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ತೆರಳಿದ್ದರು. ಆದರೆ ಇನ್ನೇನು ದೇವಾಲಯ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ, ತಂತ್ರಿಗಳು ಒಂದು ವೇಳೆ ಆಕೆ ದೇವಾಲಯದ ಪ್ರವೇಶಕ್ಕೆ ಮುಂದಾದರೆ, ದೇವಾಲಯದ ಗರ್ಭಗುಡಿಯನ್ನು ಮುಚ್ಚಿ, ರಾಜಮನೆತನದ ಸುಪರ್ದಿಗೆ ನೀಡುತ್ತೇವೆ ಎಂದು ಎಚ್ಚರಿಸಿದ್ದರು. ಇದರಿಂದಾಗಿ ರೆಹನಾ ಫಾತಿಮಾ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯದೇ ಹಿಂದಿರುಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv