LatestMain PostNational

ಕೇರಳದ ಶಾಸಕ ಪಿಟಿ ಥಾಮಸ್ ಕ್ಯಾನ್ಸರ್‌ನಿಂದ ವಿಧಿವಶ

ತಿರುವನಂತಪುರಂ: ತೃಕ್ಕಕ್ಕರ ಕ್ಷೇತ್ರದ ಪ್ರತಿನಿಧಿಯಾಗಿದ್ದ ಕೇರಳ ವಿಧಾನಸಭೆಯ ಶಾಸಕ ಪಿಟಿ ಥಾಮಸ್(71) ಕ್ಯಾನ್ಸರ್‌ನಿಂದ ವಿಧಿವಶರಾಗಿದ್ದಾರೆ. ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗ್ಗೆ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಇವರು ಕೇರಳದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿದ್ದರು. ಕೇರಳ ರಾಜ್ಯ ವಿಧಾನಸಭೆಯ ತೃಕ್ಕಕ್ಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಎರಡು ಬಾರಿ ತೊಡುಪುಳ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. ಇವರು ಇಡುಕ್ಕಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದರೂ ಆಗಿದ್ದಾರೆ. ಇದನ್ನೂ ಓದಿ: ನಾನು ವಿಪಕ್ಷ ಶಾಸಕಿ ಅನ್ನಿಸಿಲ್ಲ, ಬೊಮ್ಮಾಯಿ, BSYಗೆ ನಮಸ್ಕಾರ: ಲಕ್ಷ್ಮಿ ಹೆಬ್ಬಾಳ್ಕರ್‌

ಪಿಟಿ ಥಾಮಸ್ ಯಾವಾಗಲೂ ಸಮಸ್ಯೆಗಳನ್ನು ಎತ್ತಿ ತೋರಿಸುವ ಹಾಗೂ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಸ್ಪಷ್ಟ ರಾಜಕೀಯ ನಿಲುವನ್ನು ವ್ಯಕ್ತಪಡಿಸುತ್ತಿದ್ದ ವ್ಯಕ್ತಿ. ಅವರು ಉತ್ತಮ ವಾಗ್ಮಿ ಹಾಗೂ ಸಂಘಟಕರಾಗಿದ್ದು, ರಾಜ್ಯ ಗಮನಾರ್ಹ ಸಂಸದರನ್ನು ಕಳೆದುಕೊಂಡಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ

ಪಿಟಿ ಥಾಮಸ್ ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು) ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿ, ನಂತರ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದರು. ಅವರು ಪರಿಸರವಾದಿ ಹಾಗೂ ಲೇಖಕರೂ ಹೌದು.

Leave a Reply

Your email address will not be published.

Back to top button