ಅಲಪ್ಪುಳ: ಕೇರಳದಲ್ಲಿ ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಕರೆಸಿ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಮ್ಯುನಿಸ್ಟ್ ಸರ್ಕಾರದ ಇಬ್ಬರು ಸಚಿವರು ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಿ ಸತ್ಕರಿಸಿದ್ದಾರೆ.
ಲೋಕೊಪಯೋಗಿ ಸಚಿವ ಸುಧಾಕರನ್ ಹಾಗೂ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಅಲಪ್ಪುಳದ ಎಸ್ ಡಿವಿ ಸೆಂಟನರಿ ಹಾಲ್ ನಲ್ಲಿ ತಂಗಿದ್ದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರ ದರ್ಶನ ಪಡೆದರು. ಶ್ರೀಗಳನ್ನು ಭೇಟಿಯಾಗಿ ತನ್ನ ಸಚಿವರ ಪ್ರಮಾದಕ್ಕೆ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಕೇರಳ ಸರ್ಕಾರ ಭಾರೀ ಟೀಕೆಗೆ ಗುರಿಯಾಗಿದ್ದ ಪ್ರಕರಣಕ್ಕೆ ತೇಪೆ ಹಚ್ಚಿದೆ.
Advertisement
ಈ ಸಂದರ್ಭದಲ್ಲಿ ಶ್ರೀಗಳ ಕಾರ್ಯದರ್ಶಿ ಇಬ್ಬರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಶ್ರೀಗಳು ಫಲಪುಷ್ಪ ಕಳುಹಿಸಿಕೊಟ್ಟಿದ್ದಾರೆ.
Advertisement
ಏನಿದು ಪ್ರಕರಣ?
ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಶೃಂಗೇರಿ ಮಠಾಧೀಶರಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹಿರಿಯ ಶ್ರೀಗಳ ಪರವಾಗಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸಿದ್ದರು. ಆದರೆ ಅವರು ವೇದಿಕೆಗೆ ಬರುವ ಹೊತ್ತಿಗೆ ಅವರಿಗೆ ಇರಿಸಲಾಗಿದ್ದ ಆಸನವನ್ನು ಕಿತ್ತುಕೊಳ್ಳಲಾಯಿತು ಎಂದು ಸ್ಥಳದಲ್ಲಿದ್ದ ಭಕ್ತಾದಿಗಳು ಆರೋಪಿಸಿದ್ದರು.
Advertisement
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇರಳ ದೇವಸ್ವಂ ಸಚಿವ ಕಡನ್ನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್, ಸ್ವಾಮೀಜಿಯವರಿಗೆಂದು ವೇದಿಕೆಯಲ್ಲಿ ಇರಿಸಲಾಗಿದ್ದ ಸಿಂಹಾಸನವನ್ನು ತೆಗೆಸಿದರು ಎಂದು ಮಾಧ್ಯಮಗಳು ವರದಿ ಮಾಡಿತ್ತು.
Advertisement
ಬಿಜೆಪಿ ಟೀಕಿಸಿತ್ತು: ಸಂಸದೆ ಶೋಭಾ ಕರಂದ್ಲಾಜೆ ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ಕೇರಳ ಸರ್ಕಾರವನ್ನು ಟೀಕಿಸಿದ್ದರು.
ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಸ್ವಾಮೀಜಿಯವರನ್ನು ಅವರಿಗೆ ಮೀಸಲಾದ ಆಸನದಲ್ಲಿ ಆಸೀನರಾಗಲು ಬಿಡದೆ ಅವರ ಆಸನವನ್ನು ಕಿತ್ತುಕೊಂಡು ವೇದಿಕೆಯಲ್ಲೇ ಅವಮಾನ ಮಾಡಿದ ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್ ನ ಈ ಕೀಳು ಮಟ್ಟದ ವರ್ತನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಹಾಗೂ ಕೇರಳದ ಮುಖ್ಯಮಂತ್ರಿ ಈ ಅವಮಾನಕಾರಿ ಘಟನೆಯ ಬಗ್ಗೆ ಶೃಂಗೇರಿ ಸಂಸ್ಥಾನದ ಸ್ವಾಮೀಜಿ ಯವರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತೇನೆ. ಇತ್ತೀಚೆಗೆ ದೇಶದಲ್ಲಿ ಜಾನುವಾರು ಹತ್ಯೆ ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗ ಇದೇ ಕೇರಳದಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಈ ಕಾಂಗ್ರೆಸ್- ಸಿಪಿಎಂ ಕೂಟಕ್ಕೆ ಇದು ” ವಿನಾಶಕಾಲೇ ವಿಪರೀತ ಬುದ್ಧಿಃ” ಎಂದು ಬರೆದಿದ್ದರು.