ತಿರುವನಂತಪುರಂ: ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಆರೋಪ ಎದುರಿಸುತ್ತಿರುವ ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ಬುಧವಾರ ರಾಜೀನಾಮೆ ಕೊಟ್ಟಿದ್ದಾರೆ.
ಸಿಪಿಐಎಂ ನಾಯಕ ಸಾಜಿ ಚೆರಿಯನ್ ಅವರು, ಸಂವಿಧಾನದ ಗುರಿ ಶ್ರೀಸಾಮಾನ್ಯರನ್ನು ಶೋಷಣೆ ಮಾಡುವುದಾಗಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದರು. ಈ ಹಿನ್ನೆಲೆ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರು, ಚೆರಿಯನ್ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಸಿಪಿಐಎಂ ಕೇಂದ್ರ ನಾಯಕತ್ವ ಮಧ್ಯಪ್ರವೇಶಿಸಿ ಸಾಜಿ ಚೆರಿಯನ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆ ಇಂದು ಅವರು ರಾಜೀನಾಮೆ ನೀಡಿದ್ದಾರೆ.
Advertisement
Advertisement
ಸಂವಿಧಾನ ವಿರೋಧಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎಡಪಕ್ಷದ ನಾಯಕರಿಂದ ವಿವರಣೆ ಕೇಳಿದ್ದಾರೆ. ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಖಾನ್ ಅವರು ಕೇಳಿದ್ದು, ಸಚಿವರ ಹೇಳಿಕೆಗಳು ಸಂವಿಧಾನವನ್ನು ಉಲ್ಲಂಘಿಸಿದೆಯೇ ಎಂದು ಪರಿಶೀಲನೆ ಮಾಡಿದ್ದಾರೆ. ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಸಾಜಿ ಚೆರಿಯನ್
Advertisement
ಸ್ಪಷ್ಟನೆ ಕೊಟ್ಟ ಚೆರಿಯನ್
ನಾನು ನಮ್ಮ ಸಂವಿಧಾನವನ್ನು ಗೌರವಿಸುವ ಮತ್ತು ಅದರ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿಯುವ ಸಾರ್ವಜನಿಕ ಸೇವಕ. ನಾನು ಎಂದಿಗೂ ಸಂವಿಧಾನವನ್ನು ಅವಮಾನಿಸುವ ಅಥವಾ ಅದರ ವಿರುದ್ಧ ಏನನ್ನೂ ಹೇಳುವ ಉದ್ದೇಶವನ್ನು ಹೊಂದಿಲ್ಲ ಎಂದು ಟೀಕೆಗಳ ನಂತರ ಚೆರಿಯನ್ ಸ್ಪಷ್ಟಪಡಿಸಿದ್ದಾರೆ.
Advertisement
ಏನಿದು ವಿವಾದ?
ಸಂವಿಧಾನದ ಬಗ್ಗೆ ಸಾಜಿ ಚೆರಿಯನ್ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಭಾರತವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ಸಂವಿಧಾನವನ್ನು ಭಾರತದ ಹೆಚ್ಚಿನ ಜನರ ಸಂಪತ್ತನ್ನು ಕಸಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತೇನೆ. ಬ್ರಿಟಿಷರು ಬರೆದಿದ್ದ ಸಂವಿಧಾನವನ್ನು ನೋಡಿ ನಮ್ಮ ಭಾರತೀಯ ನಮ್ಮ ಸಂವಿಧಾನವನ್ನು ಸಿದ್ಧಪಡಿಸಿದ್ದು, ಅದನ್ನು ನಾವು ಈ ದೇಶದಲ್ಲಿ 75 ವರ್ಷಗಳಿಂದ ಆಚರಣೆ ಮಾಡುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದರು.