ತಿರುವನಂತಪುರಂ: ಇಂದು ಉದ್ಘಾಟನೆಗೊಂಡ ಮಲಯಾಳಂ ನ್ಯೂಸ್ ಚಾನೆಲೊಂದು ಬ್ರೇಕ್ ಮಾಡಿದ ಸೆಕ್ಸ್ ಆಡಿಯೋ ಕ್ಲಿಪ್ ನ್ಯೂಸ್‍ನಿಂದಾಗಿ ಕೇರಳದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ.
ಕೇರಳದ ನ್ಯೂಸ್ ಚಾನೆಲ್‍ಗಳ ಸಾಲಿಗೆ ಸೇರ್ಪಡೆಯಾಗಲು ಮಂಗಳಂ ಟಿವಿ ಇಂದು ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಿತ್ತು. ಇಂದು ಬೆಳಗ್ಗೆ ಚಾನೆಲ್ ಅಧಿಕೃತ ಪ್ರಸಾರ ಆರಂಭವಾಗುತ್ತಿದ್ದಂತೆಯೇ ಮಂಗಳಂ ಟಿವಿ ಚಾನೆಲ್, ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ಸಹಾಯ ಯಾಚಿಸಿ ತನ್ನ ಬಳಿ ಬಂದಿದ್ದ ಮಹಿಳೆಯ ಜೊತೆ ಫೋನ್‍ನಲ್ಲಿ ಅಶ್ಲೀಲವಾಗಿ ಕಾಮೋತ್ತೇಜಿತನಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಬಿಡುಗಡೆ ಮಾಡಿತು. ಅಲ್ಲದೆ ಇಂದು ಸ್ಫೋಟಕ ಸುದ್ದಿಯೊಂದಿಗೆ ಚಾನೆಲ್ ಪ್ರಸಾರ ಕಾರ್ಯ ಶುರು ಮಾಡಲಿದೆ ಎಂದು ಮಂಗಳಂ ದಿನ ಪತ್ರಿಕೆಯಲ್ಲಿ ವರದಿಯನ್ನೂ ಪ್ರಕಟಿಸಿತ್ತು.
- Advertisement -
ಈ ಆಡಿಯೋ ಕ್ಲಿಪ್ ಮಂಗಳಂ ಟಿವಿ ಚಾನೆಲ್ ನಲ್ಲಿ ಬರುತ್ತಿದ್ದಂತೆಯೇ ಕೇರಳ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದವು. ಕೇರಳ ಸಿಎಂ ಪಿಣರಾಯಿ ವಿಜಯನ್ ಇದೊಂದು ಗಂಭೀರ ವಿಚಾರ. ಎಲ್ಲಾ ಮಾಹಿತಿ ಪಡೆದ ಬಳಿಕ ಕ್ರಮಕೈಗೊಳ್ಳುತ್ತೇನೆ ಎಂದೂ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
- Advertisement -
ಆದರೆ ಮಧ್ಯಾಹ್ನ 3 ಗಂಟೆಗೆ ಸ್ವತಃ ಎ.ಕೆ.ಶಶೀಂದ್ರನ್ ಅವರೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದರು. ಆದರೆ ಈ ಆಡಿಯೋದಲ್ಲಿರುವುದು ತನ್ನ ಧ್ವನಿ ಹೌದೋ ಅಲ್ಲವೋ ಎಂಬ ಬಗ್ಗೆ ಶಶೀಂದ್ರನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಸಹಾಯ ಯಾಚಿಸಿ ಬಂದವರಿಗೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯಿಸಿದ್ದೇನೆ. ಈ ಪ್ರಕರಣದ ಬಗ್ಗೆ ಸರ್ಕಾರ ಯಾವ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಸಲಿ ಎಂದು ಅವರು ಹೇಳಿದರು.
- Advertisement -
ಆಡಿಯೋದಲ್ಲೇನಿದೆ?: ಮಂಗಳಂ ಟಿವಿ ಚಾನೆಲ್‍ನಲ್ಲಿ ಪ್ರಸಾರವಾದ ಆಡಿಯೋದಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ಜೊತೆಗೆ ಲೈಂಗಿಕಾಸಕ್ತಿಯಿಂದ ಮಾತನಾಡುತ್ತಿದ್ದಾರೆ. ಯಾರ ಜೊತೆಗೆ ಆ ವ್ಯಕ್ತಿ ಮಾತನಾಡುತ್ತಾರೆ ಎಂದು ಆಡಿಯೋದಲ್ಲಿ ಗೊತ್ತಾಗುತ್ತಿಲ್ಲ. ಆದರೆ ಈ ವ್ಯಕ್ತಿ ಮಾತ್ರ ನಾನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ ಎಂದು ಮಾತು ಆರಂಭಿಸಿ ಮುಂದೆ ಹಂತ ಹಂತವಾಗಿ ಸೆಕ್ಸ್ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ. ಈ ಆಡಿಯೋ ಯಾರೂ ಕೇಳಿಸಿಕೊಳ್ಳಲಾಗದಷ್ಟು ಅಸಹ್ಯಕರವಾಗಿದೆ ಎನ್ನಲಾಗಿದೆ.
- Advertisement -
ಸಚಿವರ ವರ್ತನೆಗೆ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿ ಈ ರೀತಿಯ ಘಟನೆ ನಡೆಯಬಾರದಿತ್ತು. ರಾಜ್ಯದಲ್ಲಿ ಎಲ್‍ಡಿಎಫ್ ಸರ್ಕಾರ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳದಲ್ಲಿ ಎಲ್‍ಡಿಎಫ್ ಸರ್ಕಾರಕ್ಕೆ ಬಂದ ನಂತರ ಸಚಿವರು ರಾಜೀನಾಮೆ ನೀಡುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ 2016ರ ಅಕ್ಟೋಬರ್ ನಲ್ಲಿ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರತಿ ವಾರ ಮಂಗಳ, ಬಾಲಮಂಗಳನ್ನು ಹೊರ ತರುವ ಮಂಗಳ ಪಬ್ಲಿಕೇಶನ್ಸ್ ನವರು ಈ ವಾಹಿನಿಯನ್ನು ಆರಂಭಿಸಿದ್ದಾರೆ.
Resigned on moral grounds.All charges on me are absolutely baseless: AK Saseendran after his resignation as Kerala Transport Min (File Pic) pic.twitter.com/czOGCrV6Wl
— ANI (@ANI_news) March 26, 2017
It is up to the CM and govt to investigate the matter and they can investigate it with any agency: AK Saseendran
— ANI (@ANI_news) March 26, 2017