ತಿರುವನಂತಪುರಂ: ಕೇರಳದಲ್ಲಿ (Kerala) ಕರ್ನಾಟಕದ ನಂದಿನಿ ಹಾಲು (Nandini Milk) ಉತ್ಪನ್ನಗಳ ಮಾರಾಟಕ್ಕೆ ಮಿಲ್ಮ ಎಂದೇ ಹೆಸರಾಗಿರುವ ಕೇರಳ ಹಾಲು ಒಕ್ಕೂಟ (Kerala Milk Federation) ವಿರೋಧ ವ್ಯಕ್ತಪಡಿಸಿದೆ.
ಮಿಲ್ಮಾ (Milma) ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್‌ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ
Advertisement
Advertisement
ದೇಶದಲ್ಲಿರುವ ಹಾಲು ಒಕ್ಕೂಟಗಳು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ಕೆಲವು ನಿಯಮಗಳನ್ನು ಮುರಿಯುವುದು ನೈತಿಕವಾಗಿ ಸರಿಯಲ್ಲ. ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ನಿರ್ಧಾರದ ವಿರುದ್ಧ ಪತ್ರವನ್ನು ನೀಡಿದ್ದರೂ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ಅಮುಲ್-ನಂದಿನಿ ಸಮಸ್ಯೆಗೂ ಮುನ್ನವೇ ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಮುಲ್ ನಿರ್ಧಾರ ತಪ್ಪು. ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿ ಅವರಿಗೆ ಇಲ್ಲ ಎಂದು ಮಣಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ
Advertisement
ಹಾಲು ಒಕ್ಕೂಟಗಳು ಕೇವಲ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ ತಮ್ಮ ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧ ಎಂದು ಎಚ್ಚರಿಸಿದ್ದಾರೆ.
ಮಿಲ್ಮಾ ಮುಖ್ಯವಾಗಿ ಕರ್ನಾಟಕದ ನಂದಿನಿ ಮತ್ತು ತಮಿಳುನಾಡಿನ ಆವಿನ್ ಮೇಲೆ ಹಬ್ಬದ ಋತುಗಳಲ್ಲಿ ಮತ್ತು ಕೇರಳದಲ್ಲಿ ಕಡಿಮೆ ಹಾಲು ಉತ್ಪಾದನೆ ಸಂದರ್ಭದಲ್ಲಿ ಅವಲಂಬಿತವಾಗಿದೆ. ಹೀಗಾಗಿ ನಂದಿನಿಯ ಉತ್ತಮ ಗ್ರಾಹಕರಾಗಿರುವ ಮಿಲ್ಮಾ ಸಂಸ್ಥೆಗೆ ಹೆಚ್ಚಿನ ಹಾಲು ಮಾರಾಟ ಮಾಡಿ ತೊಂದರೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು
ಕಳೆದ ಆರು ತಿಂಗಳ ಅಂಕಿ ಅಂಶಗಳ ಪ್ರಕಾರ, ನಮ್ಮ ಉತ್ಪನ್ನ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ನಂದಿನಿಯ ಆಗಮನವು ಕೇರಳ ಮಾರುಕಟ್ಟೆಯಲ್ಲಿರುವ ಇತರ ಉತ್ಪನ್ನಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ, ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ನಂದಿನಿ ತಮ್ಮ ಮಳಿಗೆಗಳನ್ನು ತೆರೆದಿದೆ. ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್‌ಗಳಲ್ಲೂ ನಂದಿನಿ ಉತ್ಪನ್ನಗಳು ದೊರೆಯುತ್ತವೆ.