– ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ
ತಿರುವನಂತಪುರಂ: ಕೇರಳದಲ್ಲಿ (Kerala) ಯುವಕನೊಬ್ಬ ಪ್ರೇಯಸಿ (Lover) ಹಾಗೂ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
Advertisement
23 ವರ್ಷದ ಯುವಕ ತನ್ನ 13 ವರ್ಷದ ಸಹೋದರ, 80 ವರ್ಷದ ಅಜ್ಜಿ ಮತ್ತು ಪ್ರೇಯಸಿ ಸೇರಿ 6 ಜನರನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ತಿರುವನಂತಪುರಂನ (Thiruvananthapuram) ವೆಂಜರಮೂಡುವಿನಲ್ಲಿ ನಡೆದಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು
Advertisement
Advertisement
ಆರೋಪಿ ಅಫಾನ್ ವಿಷ ಸೇವಿಸಿ ಬಂದು ಠಾಣೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಹಗರಣ – ಆಗಿನ ಮೈಸೂರು ಡಿಸಿ, ಹಾಲಿ ಸಂಸದ ಕುಮಾರ್ ನಾಯಕ್ ಲೋಪ
Advertisement
ಅಫಾನ್ ತನ್ನ ಮನೆಯವರನ್ನು ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಹಲ್ಲೆಗೊಳಗಾದ ಐವರು ಸಾವನ್ನಪ್ಪಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಫಾನ್ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ವೈದ್ಯ ಸಾವು
ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.