ತಿರುವನಂತಪುರಂ: 10 ವರ್ಷದ ಬಾಲಕಿಗೆ 2 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದ 41 ವರ್ಷದ ಕಾಮುಕನಿಗೆ ಕೇರಳದ ಪತ್ತನಂತಿಟ್ಟದ ಪೋಕ್ಸೋ ನ್ಯಾಯಾಲಯವು (Pocso Court) 142 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ನ್ಯಾಯಾಲಯವು ವ್ಯಕ್ತಿಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ಆರೋಪಿ ದಂಡ ಪಾವತಿಸದೇ ಇದ್ದರೆ ಇನ್ನೂ ಮೂರು ವರ್ಷಗಳ ಕಾಲ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದು ಜಿಲ್ಲೆಯ ಪೋಕ್ಸೋ ಪ್ರಕರಣಗಳಲ್ಲೇ ಅತ್ಯಂತ ಗರಿಷ್ಠ ಅವಧಿಯ ಶಿಕ್ಷೆಯಾಗಿದೆ. ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ
Advertisement
Advertisement
ಆನಂದನ್ ಪಿ.ಆರ್. ಅಲಿಯಾಸ್ ಬಾಬು ಎಂದು ಗುರುತಿಸಲಾದ ಅಪರಾಧಿಯು 2019 ಮತ್ತು 2021ರ ನಡುವೆ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಆಕೆ ಮೇಲೆ ಅನೇಕ ಬಾರಿ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅದಕ್ಕಾಗಿ ತಿರುವಲ್ಲಾ ಪೊಲೀಸರು (Police) ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
Advertisement
ಪ್ರಾಸಿಕ್ಯೂಷನ್ ಪರವಾಗಿ ಪ್ರಧಾನ ಪೋಕ್ಸೋ (POCSO) ಪ್ರಾಸಿಕ್ಯೂಟರ್ ವಕೀಲ (Advocate) ಜೇಸನ್ ಮ್ಯಾಥ್ಯೂಸ್ ಹಾಜರಾದ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆಗಳು, ವೈದ್ಯಕೀಯ ದಾಖಲೆಗಳು ಮತ್ತು ಸಾಕ್ಷ್ಯಗಳು ಪ್ರಾಸಿಕ್ಯೂಷನ್ ಪರವಾಗಿ ಪ್ರಬಲವಾಗಿದ್ದವು. ಪತ್ತನಂತಿಟ್ಟ ಜಿಲ್ಲಾ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೆಲ್ಲವನ್ನೂ ಪರಿಶೀಲಿಸಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ
Advertisement
ಒಟ್ಟು 142 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಪೋಕ್ಸೋ ಅಡಿಯಲ್ಲಿ ಪಟ್ಟಿ ಮಾಡಲಾದ ಅಪರಾಧಗಳಿಗಾಗಿ ಒಟ್ಟು 5 ಲಕ್ಷ ರೂ. ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.