ತಿರುವನಂತಪರ: ಮೂರು ಬಾರಿ ತಲಾಖ್ ಪದವನ್ನು ಹೇಳುವ ಮೂಲಕ ವಿಚ್ಛೇದನದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪತ್ನಿಯ ಸಂಬಂಧಿಕರು ಯವಕನೊಬ್ಬನಿಗೆ ಹಲ್ಲೆ ನಡೆಸಿರುವ ಘಟನೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
Advertisement
ಅಬ್ದುಲ್ ಅಸೀಬ್ (30) ಹಲ್ಲೆಗೊಳಗಾದ ಯವಕ. ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ಈತ ಕೆಲದಿನಗಳ ನಂತರ ಪತ್ನಿಯಿಂದ ಬೇರೆಯಾಗಿದ್ದ. ಆ ಬಳಿಕ ಪತ್ನಿಯ ತಂದೆ, ತಾಯಿ ಮತ್ತು ಸಂಬಂಧಿಕರು ಅಸೀಬ್ ಬಳಿ ವಿಚ್ಛೇದನ ನೀಡುವಂತೆ ತ್ರಿವಳಿ ತಲಾಖ್ ಹೇಳಲು ಕೇಳಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದ್ದ ಅಸೀಬ್‍ಗೆ ಆತನ ಮಾವ ಹಾಗೂ ಪತ್ನಿಯ ಚಿಕ್ಕಪ್ಪಂದಿರು ಹಲ್ಲೆ ನಡೆಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ
Advertisement
Advertisement
ಅಸೀಬ್ ಅನುಮಾನಾಸ್ಪದ ಸ್ವಭಾವದವ ಹೊಂದಿದ್ದು, ಮಾದಕ ದ್ರವ್ಯ ಸೇವಿಸುತ್ತಿದ್ದರಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪತಿ, ಪತ್ನಿ ದೂರವಾಗಿದ್ದರು ಎಂದು ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ
Advertisement
ನಿನ್ನೆ ಅಸೀಬ್‍ನ ಕಚೇರಿಗೆ ಆಗಮಿಸಿದ ಪತ್ನಿಯ ಚಿಕ್ಕಪ್ಪಂದಿರು ಪತ್ನಿಯ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಂಕೇತಿಕವಾಗಿ ಪತ್ನಿಗೆ ವಿಚ್ಛೇದನ ನೀಡುವ ಭಾಗವಾಗಿ ತ್ರಿವಳಿ ತಲಾಖ್ ಹೇಳಬೇಕು ಎಂದು ಒತ್ತಾಯಿಸಿದಾಗ ತಲಾಕ್ ಹೇಳಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿಯ ಚಿಕ್ಕಪ್ಪಂದಿರು ಅಸೀಬ್‍ಗೆ ಮನಬಂದಂತೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆಸೀಬ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಘಟನೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕೊಟ್ಟಕ್ಕಲ್ ಪೊಲೀಸರು ಬಂಧಿಸಿದ್ದಾರೆ.