ಚಾಮರಾಜನಗರ: ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿದ್ದರೂ ಗಡಿ ಜಿಲ್ಲೆಯಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಇಲವಾಲ ನಿವಾಸಿ ಶ್ರೀನಿವಾಸರಾವ್ ಬಂಧಿತ ಆರೋಪಿ. ಈತ ಮೈಸೂರಿನಿಂದ ಆಗಾಗ್ಗೆ ಹನೂರು, ರಾಮಾಪುರ, ಅಜ್ಜೀಪುರಕ್ಕೆ ಬಂದು ಕೇರಳ ಲಾಟರಿಗಳನ್ನು ಮಾರಾಟ ಮಾಡಿ ತೆರಳುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 160 ಲಾಟರಿ ಟಿಕೆಟ್‍ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್
ಜಿಲ್ಲಾದ್ಯಂತ ಕೇರಳ ಲಾಟರಿ ದಂಧೆ?
ಕೇರಳ ಲಾಟರಿ ಜಿಲ್ಲಾದ್ಯಂತ ಹರಡಿದೆ ಎನ್ನುವುದಕ್ಕೆ ರಾಮಾಪುರದ ಅಕ್ರಮ ಲಾಟರಿ ಮಾರಾಟ ಪತ್ತೆ ಹಚ್ಚಿರುವುದು ಸಾಕ್ಷಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆಯಲ್ಲಿ 900 ಟಿಕೆಟ್‍ನೊಂದಿಗೆ ಲಾಟರಿ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದರು.
ರಾಜ್ಯದಲ್ಲಿ ಲಾಟರಿ ನಿಷೇಧ ಮಾಡಿರುವುದರಿಂದ ಅಕ್ರಮ ದಂಧೆ ಕೋರರು ಗಡಿ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿ ಕೇರಳ ಹಾಗೂ ತಮಿಳುನಾಡು ಲಾಟರಿ ಟಿಕೆಟ್‍ಗಳನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಕೂಲಿ ಮಾಡುವ ಬಡವರೇ ದಂಧೆ ಕೋರರ ಟಾರ್ಗೆಟ್ ಮಾಡಿದ್ದಾರೆ. ದಂಧೆಗೆ ಸಿಲುಕಿರುವ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ