ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಅದೇ ರೀತಿ ಮಂಡ್ಯದ ಮೆಕಾನಿಕ್‌ಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.
ಮಂಡ್ಯದ (Mandya) ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ (Wayanad) ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಈ ವೇಳೆ ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ (Thiruvonam Bumper Lottery) ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ಗೆದ್ದಿದ್ದಾರೆ. ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ದೌಡು ಕಿತ್ತಿದ್ದಾರೆ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್
ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 360 ಕೋಟಿ ಮೌಲ್ಯದ 71 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಹಾಗಾಗಿ ವಿವಿಧ ಹಂತದ ಬಹುಮಾನಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಓಣಂ ಬಂಪರ್‌ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮಲಯಾಳಿಗಳು ಉತ್ತರ ಹುಡುಕುತ್ತಿದ್ದರು. ಕೊನೆಗೆ ಕಾದು ನೋಡುತ್ತಿದ್ದವರಿಗೆ ಶಾಕ್ ನೀಡಿದಂತೆ ಕರ್ನಾಟಕ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ದಸರಾ ವಿಶೇಷ| ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಸಂಚರಿಸಲಿದೆ ಡೆಮು ರೈಲು