– ತಿರುವನಂತಪುರಂ ಗೆದ್ದ ಬಿಜೆಪಿಗೆ ʻಕೈʼ ಸಂಸದ ಶಶಿ ತರೂರ್ ಅಭಿನಂದನೆ
ತಿರುನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ (Kerala local Body Polls Resuts) ಪ್ರಕಟಗೊಂಡಿದೆ. ತಿರುವನಂತಪುರಂ ನಗರಪಾಲಿಕೆ ಹೊರತುಪಡಿಸಿದ್ರೆ ಉಳಿದೆಲ್ಲ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟ ಜಯಭೇರಿ ಬಾರಿಸಿದೆ.
ಕಾರ್ಪೊರೇಷನ್, ಪುರಸಭೆ, ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಯುಡಿಎಫ್ ಪ್ರಾಬಲ್ಯ ಸಾಧಿಸಿದಿದ್ರೆ, ಜಿಲ್ಲಾ ಪಂಚಾಯಿತಿಯಲ್ಲಿ ಯುಡಿಎಫ್, ಎಲ್‌ಡಿಎಫ್ ಸಮಬಲ ಸಾಧಿಸಿದ್ದು, ಮ್ಯಾಜಿಕ್ ನಂಬರ್ ಗಾಗಿ ಉಭಯ ಪಕ್ಷಗಳ ಅಭ್ಯರ್ಥಿಗಳನ್ನ ತಮ್ಮತ್ತ ಸೆಳೆಯಲು ಎದುರು ನೋಡುತ್ತಿವೆ ಎಂದು ವರದಿಗಳು ತಿಳಿಸಿವೆ.

ರಾಜಧಾನಿಯಲ್ಲಿ ಬಿಜೆಪಿ ಕಮಾಲ್
ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಕಮಾಲ್ ಮಾಡಿದೆ. ಸಿಪಿಎಂ ಬಿಗಿಮುಷ್ಠಿಯಲ್ಲಿದ್ದ ತಿರುವನಂತಪುರ ಕಾರ್ಪೋರೇಷನ್ ಹಾಗೂ ತ್ರಿಪುನಿತುರಾ ಮುನಿಸಿಪಾಲಿಟಿಯನ್ನು ಅನ್ನು ಬಿಜೆಪಿ ತನ್ನ ವಶ ಮಾಡಿಕೊಂಡಿದೆ. ಈ ಮೂಲಕ ಐತಿಹಾಸಿಕ ಸಾಧಾನೆ ಮಾಡಿದೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಈ ಸಾಧನೆ ಮಾಡಲಾಗಿದೆ.
ಕೇರಳ ರಾಜಧಾನಿಯ ರಾಜಕೀಯ ಪಾಳಯದಲ್ಲಿ ಸಂಭಾವ್ಯ ಬದಲಾವಣೆಯ ಸೂಚನೆಯಾಗಿದೆ ಅಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ತಿರುವನಂತಪುರದ 101 ವಾರ್ಡ್‌ಗಳ ಪೈಕಿ ಬಿಜೆಪಿ 50 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿದೆ. ಹಾಗಾಗಿ, ಮೇಯರ್ ಆಯ್ಕೆಯಾಗುವ ಸಾಧ್ಯತೆಯಿದೆ. ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಎಲ್‌ಡಿಎಫ್, ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ವಾರ್ಡ್ ಮಾತ್ರ ಜಯಿಸಿದೆ.

ಮ್ಯಾಜಿಕ್ ನಂಬರ್‌ಗಾಗಿ ಕಸರತ್ತು
ಪ್ರಸ್ತುತ, ಎನ್‌ಡಿಎ 50 ಸ್ಥಾನಗಳನ್ನ ಗೆದ್ದಿದೆ. ಎಲ್‌ಡಿಎಫ್ 29 ವಾರ್ಡ್‌ಗಳಲ್ಲಿ ಜಯಗಳಿಸಿದರೆ ಯುಡಿಎಫ್ ಮೈತ್ರಿಕೂಟ 19 ವಾರ್ಡ್‌ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಎರಡು ಕ್ಷೇತ್ರವನ್ನು ಇತರರು ಗೆದ್ದಿದ್ದಾರೆ. ಬಹುಮತಕ್ಕೆ 51 ಸ್ಥಾನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ನಿಂತು ಜಯಗಳಿಸಿದ ಇಬ್ಬರು ಸದಸ್ಯರ ಜೊತೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇನ್ನುಳಿದ ಕಾರ್ಪೋರೇಷನ್‌ಗಳ ಫಲಿತಾಂಶ
* ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 16, ಯುಡಿಎಫ್ 27, ಎನ್‌ಡಿಎ 12 ಸ್ಥಾನಗಳಲ್ಲಿ ಜಯಗಳಿಸಿದೆ.
* ಎರ್ನಾಕುಲಂ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 20, ಯುಡಿಎಫ್ 46, ಎನ್‌ಡಿಎ 6 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
* ತ್ರಿಶೂರ್ ಕಾರ್ಪೊರೇಷನ್‌ನಲ್ಲಿ ಯುಡಿಎಫ್ 33, ಎಲ್‌ಡಿಎಫ್ 11, ಎನ್‌ಡಿಎ 8.
* ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 34, ಯುಡಿಎಫ್ 26, ಎನ್‌ಡಿಎ 13.
* ಕಣ್ಣೂರು ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 15, ಯುಡಿಎಫ್ 36, ಎನ್‌ಡಿಎ 4, ಓರ್ವ ಸ್ವತಂತ್ರ ಅಭ್ಯರ್ಥಿಗೆ ಜಯ ಸಿಕ್ಕಿದೆ.
ಪುರಸಭೆಯಲ್ಲಿ ಯುಡಿಎಫ್‌ಗೆ ಅದ್ಭುತ ಜಯ
ಪುರಸಭೆಯ 86 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ 54, ಎಲ್‌ಡಿಎಫ್ 28, ಎನ್‌ಡಿಎ 2, ಇತರೆ ಓರ್ವ ಗೆಲುವು ಸಾಧಿಸಿದ್ದರೆ, 1 TIE ಗೆದ್ದಿದೆ.

ಗ್ರಾಪಂ ನಲ್ಲಿ ಯುಡಿಎ ದೊಡ್ಡ ಜಯ, ಜಿಪಂ ನಲ್ಲಿ ಸಮಬಲ
941 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ 504, ಎಲ್‌ಡಿಎಫ್ 341, ಟಿಐಎ 64, ಎನ್‌ಡಿಎ 26 ಹಾಗೂ ಇತರ 6 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇನ್ನೂ 14 ಜಿಲ್ಲಾ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ 7, ಎಲ್‌ಎಫ್ 7ರಲ್ಲಿ ಗೆಲುವು ಸಾಧಿಸಿವೆ. ಮ್ಯಾಜಿಕ್ ನಂಬರ್‌ಗೆ 8 ಸ್ಥಾನಗಳ ಅಗತ್ಯಬಿದ್ದು, ಎರಡೂ ಪಕ್ಷಗಳು ಒಂದು ಸ್ಥಾನವನ್ನ ಸೆಳೆಯಲು ಕಸರತ್ತು ನಡೆಸಿವೆ.
ಬ್ಲಾಕ್ ಚುನಾವಣೆಯಲ್ಲಿ ಯುಡಿಎಫ್ 79, ಎಲ್‌ಡಿಎಫ್ 63, ಟಿಐಇ 10 ಸ್ಥಾನಗಳಲ್ಲಿ ಜಯಭೇರಿ ಭಾರಿಸಿವೆ.
ಪ್ರಧಾನಿ ಮೋದಿ, ʻಕೈʼ ಸಂಸದ ತರೂರ್ ಅಭಿನಂದನೆ
ಇನ್ನು, ಐತಿಹಾಸಿಕ ಸಾಧನೆ ಮಾಡಿರುವ ತಿರುವನಂತಪುರ ಬಿಜೆಪಿಗೆ ಪ್ರಧಾನಿ ಮೋದಿ ಕೂಡ ಅಭಿನಂದಿಸಿದ್ದಾರೆ. ವಿಚಿತ್ರ ಅಂದರೆ ಬಿಜೆಪಿ ಸಾಧನೆಯನ್ನು ಅಲ್ಲಿನ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಅಭಿನಂದಿಸಿದ್ದಾರೆ.

