ಲಕ್ನೋ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗೆ ತೆರಳುತ್ತಿದ್ದ ವೇಳೆ ಉತ್ತರ ಪ್ರದೇಶದ ಪೊಲೀಸರಿಂದ (Uttar Pradesh) ಬಂಧನಕ್ಕೊಳಗಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ (Siddique Kappan) ಲಕ್ನೋ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜಾರಿ ನಿರ್ದೇಶನಾಲಯವು (ED) ಸಲ್ಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ (Allahabad High Court) ಡಿಸೆಂಬರ್ 23 ರಂದು ಜಾಮೀನು ಪಡೆದ ಒಂದು ತಿಂಗಳ ನಂತರ ಕಪ್ಪನ್ ಬಿಡುಗಡೆಯಾಗಿದ್ದಾರೆ. ಕಪ್ಪನ್ ಅವರ ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿ ಬೆಳಗ್ಗೆ 8.30ಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಲಕ್ನೋ ಹಿರಿಯ ಜೈಲು ಸೂಪರಿಂಟೆಂಡೆಂಟ್ ಆಶಿಶ್ ತಿವಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಮಲ ಪೇಂಟಿಂಗ್ – ಸಂಸದ ತೇಜಸ್ವಿ ಸೂರ್ಯ ವಿರುದ್ಧ BBMP ಗರಂ
Advertisement
Advertisement
ಬಿಡುಗಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಪ್ಪನ್ (Siddique Kappan), 28 ತಿಂಗಳು ಸುದೀರ್ಘ ಹೋರಾಟದ ಬಳಿಕ ನಾನು ಹೊರಗಿದ್ದೇನೆ. ಮಾಧ್ಯಮಗಳಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ, ಅದರಿಂದ ಸಂತೋಷವಾಗಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣ – ನೇಪಾಳದಿಂದ ಬಂತು 6 ಕೋಟಿ ವರ್ಷ ಹಳೆಯ ಸಾಲಿಗ್ರಾಮ ಬಂಡೆ
Advertisement
Advertisement
ತಮ್ಮ ವಿರುದ್ಧ ಪೊಲೀಸರು (Police) ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿ, ನಾನು ಹತ್ರಾಸ್‌ಗೆ ವರದಿ ಮಾಡಲು ಹೋಗಿದ್ದೆ ಅದರಲ್ಲಿ ತಪ್ಪೇನಿದೆ? ನನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಹೊರತುಪಡಿಸಿ ನನ್ನಲ್ಲಿ ಏನೂ ಸಿಕ್ಕಿಲ್ಲ. ನನ್ನ ಬಳಿ ಎರಡು ಪೆನ್ನುಗಳು ಮತ್ತು ನೋಟ್‌ಬುಕ್ ಕೂಡ ಇತ್ತು. ಅನಗತ್ಯ ಆರೋಪಗಳನ್ನು ನನ್ನ ಮೇಲೆ ಹೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k