ಕೊಚ್ಚಿ: ಮಾಲ್‍ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಯಾವುದೇ ಹಕ್ಕು ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.
ಎರ್ನಾಕುಲಂನಲ್ಲಿರುವ ಲಾಲು ಮಾಲ್‍ಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಪರವಾನಿಗೆ ನೀಡಲಾಗಿದೆಯೇ ಎಂದು ಕಲಾಮಸ್ಸೇರಿ ನಗರಸಭೆಗೆ ಹೈಕೋರ್ಟ್ ಪ್ರಶ್ನಿಸಿದೆ. ನಟ ಪೌಲಿ ವಡಕ್ಷಣ್ ಅವರು ಡಿ.2ರಂದು ಮಾಲ್‍ಗೆ ಭೇಟಿ ನೀಡಿದ್ದಾಗ ಪಾರ್ಕಿಂಗ್ ಶುಲ್ಕ ವಿಧಿಸಿದ್ದರು. ಈ ಹಣವನ್ನು ಪಾವತಿಸದಿದ್ದರೆ ಹೊರಹೋಗಲು ಬಿಡುವುದಿಲ್ಲ ಎಂದು ಮಾಲ್‍ನ ಸಿಬ್ಬಂದಿ ಹೇಳಿದ್ದರು. ಈ ವಿಚಾರವನ್ನು ಅವರು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
Advertisement
Advertisement
ಕಟ್ಟಡ ಕಟ್ಟುವಾಗ ಇರುವ ನಿಯಮಗಳಂತೆ ಪಾರ್ಕಿಂಗ್ ಜಾಗವನ್ನು ನಿಗದಿ ಮಾಡಬೇಕು. ಪಾರ್ಕಿಂಗ್ ಸ್ಥಳವಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಆದರೆ ಕಟ್ಟಡ ನಿರ್ಮಾಣ ಮಾಡಿದ ನಂತರ ಪಾರ್ಕಿಂಗ್‍ಗೆ ಮಾಲೀಕರು ಶುಲ್ಕ ವಿಧಿಸಬಹುದೇ ಎಂಬುದು ಈಗಿರುವ ಪ್ರಶ್ನೆ. ಮೇಲ್ನೋಟಕ್ಕೆ ನೋಡಿದರೆ ಮಾಲ್‍ಗಳಿಗೆ ಶುಲ್ಕ ಸಂಗ್ರಹಿಸುವ ಯಾವುದೇ ಅಧಿಕಾರವಿಲ್ಲ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ ಎಫೆಕ್ಟ್ – 25 ಪೊಲೀಸರಿಗೆ ಕೊರೊನಾ
Advertisement
ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ನೀಡಿರುವ ಪರವಾನಗಿಯ ಕುರಿತಾದ ಸಂಪೂರ್ಣ ಮಾಹಿತಿ ಒದಗಿಸುವಂತೆ ನಗರ ಸಭೆಗೆ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜ.28ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ