ಅಯ್ಯಪ್ಪನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರೆಹನಾ ಫಾತಿಮಾಗೆ ಬಿಗ್ ರಿಲಿಫ್

Public TV
2 Min Read
REHANA FATHIMA

ತಿರುವನಂತಪುರಂ: ಶಬರಿಮಲೆ ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾಗೆ ಬಿಗ್ ರಿಲಿಫ್ ಸಿಕ್ಕಿದೆ.

ಪೊಲೀಸರು ರೆಹನಾ ಫಾತಿಮಾಳನ್ನು ಕೇರಳ ಹೈಕೋರ್ಟ್ ಗೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುನಿಲ್ ಥಾಮಸ್ ಅವರು, ಫಾತಿಮಾಳಿಗೆ ಷರತ್ತು ಬದ್ಧ ಜಾಮಿನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

50 ಸಾವಿರ ರೂ. ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಪಂಪಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ತೆರಳಬಾರದು, ವಿವಾದಾತ್ಮಕ ಹೇಳಿಕೆ ನೀಡದಂತೆ ಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

FATHIMA 1

ಏನಿದು ಪ್ರಕರಣ?
ರೆಹನಾ ಫಾತಿಮಾಳ ಕೆಲವೊಂದು ಫೇಸ್‍ಬುಕ್ ಪೋಸ್ಟ್‍ಗಳು ಧಾರ್ಮಿಕ ಮನೋಭಾವನೆಗೆ ಧಕ್ಕೆಯುಂಟು ಮಾಡುವಂತಿದೆ ಎಂದು ಆರೋಪಿಸಿ ರಾಧಾಕೃಷ್ಣ ಮೆನನ್ ಎಂಬವರು ಪತ್ತನಂತಿಟ್ಟ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಫಾತಿಮಾ ಮೇಲೆ ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಮನೋಭಾವಕ್ಕೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗಿದ್ದರಿಂದ ಬಂಧನ ಭೀತಿಯಲ್ಲಿದ್ದ ರೆಹನಾ ಕೇರಳ ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ರೆಹನಾರ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿತ್ತು.

REHANA

ರೆಹನಾ ಫಾತಿಮಾ ಯಾರು?:
ಸಾಮಾಜಿಕ ಕಾರ್ಯಕತೆ ರೆಹನಾ ಫಾತಿಮಾ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರಿಂದ ಅಕ್ಟೋಬರ್ ನಲ್ಲಿ ಅಯ್ಯಪ್ಪನ ದೇಗುಲದ ಪ್ರವೇಶಕ್ಕೆ ಮುಂದಾಗಿದ್ದಳು. ಫಾತಿಮಾ ಜೊತೆಗೆ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಕೂಡ ಇದ್ದರು. ಈ ಇಬ್ಬರು ಮಹಿಳೆಯರಿಗೆ 180 ಪೊಲೀಸರ ಬಿಗಿ ಭದ್ರತೆ ನೀಡಲಾಗಿತ್ತು. ಆದರೆ ಮಹಿಳೆಯ ಪ್ರವೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ದೇಗುಲ ಪ್ರವೇಶ ಮಾಡಲು ಸಾಧ್ಯವಾಗದೇ ಮರಳಿದ್ದರು. ಬಳಿಕ ರೆಹನಾ ಫಾತಿಮಾ ಅಯ್ಯಪ್ಪ ಹಾಗೂ ಭಕ್ತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ಬಂಧನಕ್ಕೆ ಒಳಗಾಗಿದ್ದಳು. ಬಂಧನವಾದ ಹಿನ್ನೆಲೆಯಲ್ಲಿ ಬಿಎಸ್‍ಎನ್‍ಎಲ್ ಫಾತಿಮಾಳನ್ನು ಕೆಲಸದಿಂದ ಅಮಾನತು ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *