ತಿರುವನಂತರಪುರಂ: ಹೆಂಡತಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಹಾಗೂ ಆಕೆ ನಿರೀಕ್ಷೆಯ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಮಾರು 13 ವರ್ಷಗಳ ಕಾಲದಿಂದ ಪತ್ನಿಯಿಂದ ಬೇರ್ಪಟ್ಟಿದ್ದ ಪತಿಯು ತಮ್ಮ ಮದುವೆಯನ್ನು ರದ್ದು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿ ಈ ತೀರ್ಪು ನೀಡಿದೆ. ಮಹಿಳೆಯೂ ಪತಿಯಿಂದ ಈ ರೀತಿಯ ನಡುವಳಿಕೆಯನ್ನು ಸಹಿಸಿಕೊಳ್ಳಬಾರದು ಎಂದಿದೆ.
Advertisement
Advertisement
ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಸಿಎಸ್ ಸುಧಾ ಅವರ ಪೀಠವು ವಿಚ್ಛೇದಿತ ಕಾಯ್ದೆಯಡಿಯಲ್ಲಿ ಈ ತೀರ್ಪನ್ನು ನೀಡಿದೆ. ಪತಿಯು ಪದೇ ಪದೇ ಪತ್ನಿಯನ್ನು ತಮ್ಮ ನಿರೀಕ್ಷೆಯ ಪತ್ನಿಯಲ್ಲ ಎನ್ನುವುದರ ಜೊತೆಗೆ ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡುವುದು ಮಾನಸಿಕ ಕ್ರೌರ್ಯವಾಗಿದೆ. ಇದನ್ನು ಪತ್ನಿಯು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಸಹೋದ್ಯೋಗಿ ಗಟ್ಟಿಯಾಗಿ ತಬ್ಬಿಕೊಂಡಿದ್ರಿಂದ ಮುರಿಯಿತಂತೆ ಮಹಿಳೆಯ 3 ಪಕ್ಕೆಲುಬು!
Advertisement
ದಾಖಲೆಗಳ ಪ್ರಕಾರ ದಂಪತಿ ಕೇವಲ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇದ್ದಂತೆ ಕಂಡುಬರುತ್ತದೆ. ನಂತರ ಅವರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪತಿಯು ಪತ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಜೊತೆಗೆ ಪತ್ನಿಯು ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಪತಿ ಒಡನಾಟದಲ್ಲಿ ತೊಡಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪತಿ, ಪತ್ನಿಯರಾಗಿ ಮುಂದುವರಿಯಲು ಹೆಚ್ಚು ಉತ್ಸಾಹಕರಾಗಿಲ್ಲ. ಪತ್ನಿಗೆ 26 ಮತ್ತು ಪತಿಗೆ 29 ವರ್ಷ ವಯಸ್ಸಾಗಿದ್ದು, ಮದುವೆ ಬಳಿಕ ಅವರ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಏರ್ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.