– ಆಟಗಾರನ ಫುಟ್ಬಾಲ್ ಮೇಲಿನ ಪ್ರೀತಿಗೆ ಕೇಂದ್ರ ಸಚಿವರೇ ಫಿದಾ
ತಿರುವನಂತಪುರಂ: ಭಾರತದಲ್ಲಿ ಕ್ರಿಕೆಟ್‍ಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವ ಕ್ರೀಡೆಗೂ ನೀಡುವುದಿಲ್ಲ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಈ ಮಾತಿಗೆ ಭಿನ್ನ ಎಂಬಂತೆ ಯುವಕನೊಬ್ಬ ತನ್ನ ಮದುವೆಯ ಸಮಾರಂಭಕ್ಕೆ ಗೈರಾಗಿ ಫುಟ್ಬಾಲ್ ಪಂದ್ಯವನ್ನು ಆಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಈ ಕುರಿತು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಟ್ವೀಟ್ ಮಾಡಿ ಯುವಕನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಆತನನ್ನು ಭೇಟಿ ಆಗಬೇಕು ಎಂದು ತಿಳಿಸಿದ್ದಾರೆ.
Advertisement
Advertisement
ಏನಿದು ಘಟನೆ?
ಕೇರಳದ ರಿದ್ವಾನ್ ಯುವಕನ ಮದುವೆ ನಿಶ್ಚಯವಾಗಿತ್ತು. ಆದರೆ ಆದೇ ದಿನ ರಿದ್ವಾನ್ ಪ್ರತಿನಿಧಿಸುತ್ತಿದ್ದ ಫಿಫಾ ಮೆಂಜೇರಿ ತಂಡ ಎ7 ಲೀಗ್ ನಲ್ಲಿ ಭಾಗವಹಿಸಬೇಕಾಗಿತ್ತು. ಪರಿಣಾಮ ಇಕ್ಕಟ್ಟಿಗೆ ಸಿಲುಕಿದ ರಿದ್ವಾನ್ ಮದುವೆಯ ದಿನ ವಧುವಿನ ಬಳಿ 5 ನಿಮಿಷ ಎಂದು ಕಾಲಾವಕಾಶ ಕೇಳಿ ಪಂದ್ಯ ಆಡಲು ತೆರಳಿದ್ದಾರೆ. ಪಂದ್ಯ ಮುಕ್ತಾಯವಾದ ಬಳಿಕ ಮದುವೆ ಕಾರ್ಯ ನಡೆಸಿದ್ದಾರೆ.
Advertisement
Ridvan asked 5 minutes from his bride on his wedding day to play football! What passion!
I want to meet him! #5MinuteAur #KheloIndiahttps://t.co/BLLvpPr715
— RajyavardhanRathore (@Ra_THORe) January 25, 2019
Advertisement
ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಿದ್ವಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕುರಿತ ವರದಿಯನ್ನು ಸ್ಥಳೀಯ ಮಾಧ್ಯಮವೊಂದು ಪ್ರಕಟಿಸಿತ್ತು. ಈ ವರದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ರೀ ಟ್ವೀಟ್ ಮಾಡಿರುವ ಕೇಂದ್ರ ಸಚಿವರು, ರಿದ್ವಾನ್ ಫುಟ್ಬಾಲ್ ಆಡಲು ವಧುವಿನ ಬಳಿ 5 ನಿಮಿಷ ಕಾಲಾವಕಾಶ ಕೇಳಿದ್ದಾರೆ. ಇದು ಆಟದ ಬಗ್ಗೆ ಆತನಿಗೆ ಇರುವ ಉತ್ಸಾಹವನ್ನು ತೋರುತ್ತದೆ ಎಂದು ಬರೆದುಕೊಂಡಿದ್ದಾರೆ.
ಇತ್ತ ವರನ ಮದುವೆ ಸಮಾರಂಭದ ಕಾರ್ಯಕ್ರಮಕ್ಕಿಂತ ರಿದ್ವಾನ್ ಫುಟ್ಬಾಲ್ ಪಂದ್ಯವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಒಂದೊಮ್ಮೆ ಪಂದ್ಯ ಮಧ್ಯಾಹ್ನದ ವೇಳೆಗೆ ಇದ್ದಿದ್ದರೆ ಕಾರ್ಯಕ್ರಮವನ್ನೇ ರದ್ದು ಮಾಡುತ್ತಿದ್ದರಾ ಎಂದು ವರನನ್ನು ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv