ತಿರುವನಂತಪುರಂ: ನಿರ್ದಯಿ ಮೊಮ್ಮಗಳೊಬ್ಬಳು 90 ವರ್ಷದ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾಗಿ ಥಳಿಸಿ ಹಲ್ಲೆಗೈದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಅಯಿಕ್ಕೆರ ಎಂಬಲ್ಲಿ ನಡೆದಿದೆ.
30 ವರ್ಷದ ದೀಪಾ ತನ್ನ ತಾಯಿಯ ತಾಯಿ ಕಲ್ಯಾಣಿ ಅವರಿಗೆ ಹಲ್ಲೆ ನಡೆಸಿದ್ದಾಳೆ. ಅಜ್ಜಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣ ಸಂಬಂಧಿಸಿದಂತೆ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ವಿಡಿಯೊದಲ್ಲೇನಿದೆ?: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ ಕಲ್ಯಾಣಿ ಅಮ್ಮ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾಳೆ. ಅಲ್ಲದೇ ಅಜ್ಜಿ ಮೈಮೇಲಿದ್ದ ಬಟ್ಟೆಯನ್ನು ಎಳೆದಾಡಿ, ಅದರಲ್ಲೇ ಥಳಿಸಿದ್ದಾಳೆ. ಬಳಿಕ ಅಜ್ಜಿಯನ್ನು ಮಲಗಿದ್ದಲ್ಲಿಂದ ಎಬ್ಬಿಸಿ, ಕುಳಿತುಕೊಳ್ಳಿಸಿ ಮತ್ತೆ ಹಲವಾರು ಬಾರಿ ಥಳಿಸುವ ಮೂಲಕ ಕ್ರೂರ ವರ್ತನೆ ತೋರಿದ್ದಾಳೆ. ಹೀಗೆ 5 ನಿಮಿಷಗಳ ಕಾಲ ಚೆನ್ನಾಗಿ ಥಳಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಸಾರ್ವಜನಿಕರು ಹಲ್ಲೆ ನಡೆಸದಂತೆ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ವೃದ್ಧೆಯ ಸಹಾಯಕ್ಕೆ ನಿಂತ ಸಾರ್ವಜನಿಕರ ಮೇಲೆಯೇ ದೀಪಾ ರೇಗಾಡಿರುವುದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.
Advertisement
ಹಲ್ಲೆ ಮಾಡಲು ಕಾರಣವೇನು?: ಹಲ್ಲೆ ನಡೆಸಿದ ದೀಪಾ ತನ್ನ ಇಬ್ಬರು ಮಕ್ಕಳೊಂದಿಗೆ ಅಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ದೀಪಾ ಕೆಲಸ ಕಳೆದುಕೊಂಡಿದ್ದಳು. ಹೀಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದಳು. ಈ ಮಧ್ಯೆ ಅಜ್ಜಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿತ್ತು. ಇದರಿಂದ ದೀಪಾ ಕಿರಿಕಿರಿ ಅನುಭವಿಸುತ್ತಿದ್ದು, ಅಜ್ಜಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 323ರ (ಸ್ವಯಂಪ್ರೇರಿತ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಆರೋಪಿ ಅಮ್ಮ ಹಾಗೂ ಅಜ್ಜಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ.
Advertisement
https://www.facebook.com/kayalfriends/videos/2021498344530524/