– ಕೇರಳದ ಸೋಲಾರ್ ಕಾಮಕಾಂಡದ ವರದಿ ಬಯಲು
– ವಿಧಾನಸಭೆಯಲ್ಲಿ ನ್ಯಾಯಾಂಗ ತನಿಖಾ ವರದಿ ಮಂಡನೆ
ತಿರುವನಂತಪುರಂ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು ಬಹುಕೋಟಿ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರಿಗೆ ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನ್ಯಾಯಾಂಗ ತನಿಖಾ ವರದಿ ಹೇಳಿದೆ.
Advertisement
ಸೋಲಾರ್ ಹಗರಣದ ನ್ಯಾಯಾಂಗ ತನಿಖಾ ವರದಿ ಗುರುವಾರ ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸರಿತಾ ನಾಯರ್ ಹೇಳಿಕೆಯನ್ನು ಆಧರಿಸಿ ತಯಾರಿಸಲಾದ ವರದಿಯಲ್ಲಿ ಕೆಸಿ ವೇಣುಗೋಪಾಲ್ ಅವರ ‘ಕೈ’ಚಳಕದ ಬಗ್ಗೆ ವಿವರವಾಗಿ ಪ್ರಸ್ತಾಪವಾಗಿದೆ.
Advertisement
ವರದಿಯಲ್ಲಿ ಏನಿದೆ?
ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ಆಹ್ವಾನಿಸಲು ಆಲೆಪ್ಪಿಯಲ್ಲಿರುವ ವೇಣುಗೋಪಾಲ್ ನಿವಾಸ ‘ರಾಜೀವಂ’ ಗೆ ಸರಿತಾ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್ ಅವರಿಗೆ ಸರಿತಾ ಪರಿಚಯವಾಗಿತ್ತು. ಉದ್ಘಾಟನೆಯ ದಿನಾಂಕ, ಸಮಯ ನಿಗದಿಯಾದ ಬಳಿಕ ಹೊರಡಲು ಸಜ್ಜಾಗಿದ್ದ ವೇಳೆ ಕೆ.ಸಿ.ವೇಣುಗೋಪಾಲ್ ಸರಿತಾ ಹಿಂಭಾಗವನ್ನು ಸವರಿದ್ದಾರೆ. ಇದೇ ವೇಳೆ ಕೈಯಲ್ಲಿದ್ದ ಫೈಲ್‍ನಲ್ಲಿ ವೇಣುಗೋಪಾಲ್ ಹೊಡೆದ ಸರಿತಾ,’ಹಾಗೆ ಮಾಡಬೇಡಿ’ ಎಂದು ಹೇಳಿದ್ದರು. ಈ ಘಟನೆಗೆ ಸರಿತಾ ಜೊತೆಗಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಜನರಲ್ ಮ್ಯಾನೇಜರ್ ಮಧ್ಯಪ್ರವೇಶಿಸಿ ಸರಿತಾ ಅವರನ್ನು ಸುಮ್ಮನಾಗಿಸಿದ್ದರು.
Advertisement
ಇದಾದ ಕೆಲ ಸಮಯದ ಬಳಿಕ ಸರಿತಾ ಮೊಬೈಲ್‍ಗೆ ವೇಣುಗೋಪಾಲ್ ‘ತುಂಬಾ ಮೃದುವಾಗಿತ್ತು’ ಎಂದು ಸಂದೇಶ ಕಳುಹಿಸಿದ್ದಾರೆ. ಇದರಿಂದ ಸಿಟ್ಟಾಗಿ ಸರಿತಾ ಫೋನ್ ಮಾಡಿ ಬೈದಾಗ ‘ಸ್ಟಿಲ್ ಲವ್ ಯೂ’ ಎಂದು ಹೇಳಿದ್ದಾರೆ. ಫೋನ್ ಕರೆಯಲ್ಲಿ ನೀನು ದೆಹಲಿಗೆ ಬಂದ್ರೆ ಮಾತ್ರ ಬ್ರ್ಯಾಂಚ್ ಉದ್ಘಾಟನೆಗೆ ಬರುತ್ತೇನೆ ಎಂದು ಷರತ್ತು ವಿಧಿಸಿದ್ದರು. ಕೊನೆಗೆ ದೆಹಲಿಗೆ ಬಂದು ಸರಿತಾ – ವೇಣುಗೋಪಾಲ್ ರಾಜಿಯಾಗಿದ್ದರು. ಇದಾದ ಬಳಿಕ ರಾತ್ರಿ ವೇಳೆ ಪದೇ ಪದೇ ವೇಣುಗೋಪಾಲ್ ಫೋನ್ ಮಾಡುತ್ತಿದ್ದರು. ಅನಿಲ್ ಕುಮಾರ್ ಹಾಗೂ ನಜರುಲ್ಲಾ ಅವರು ಕೆಸಿ ವೇಣುಗೋಪಾಲ್‍ಗೆ ಪಿಂಪ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
Advertisement
ಅಂದು ಕೇರಳದಲ್ಲಿ ಬಿಜೆಪಿ ಬಂದ್‍ಗೆ ಕರೆ ನೀಡಿತ್ತು. ಈ ವೇಳೆ ಇಕೋ ಟೂರಿಸಂ ಯೋಜನೆಯ ಪೇಪರ್ ರೆಡಿಯಿದೆ ಎಂದು ರೋಸ್ ಹೌಸ್‍ಗೆ ಬರಲು ವೇಣುಗೋಪಾಲ್ ಸರಿತಾಗೆ ಆಹ್ವಾನ ನೀಡಿದ್ದರು. ಇಕೋಟೂರಿಸಂ ಯೋಜನೆ ನಂಬಿ ಸರಿತಾ ಆಗಮಿಸಿದಾಗ ರೋಸ್ ಹೌಸ್ ನಲ್ಲಿ ಬಂದಾಗ ಸಚಿವರೂ ಇರಲಿಲ್ಲ, ಸಚಿವರ ಆಪ್ತ ಸಿಬ್ಬಂದಿಯೂ ಇರಲಿಲ್ಲ. ಇಬ್ಬರು ಪೊಲೀಸರು ಮಾತ್ರ ಗೇಟ್‍ನಲ್ಲಿ ನಿಂತಿದ್ದರು. ಫೋನ್ ಮಾಡಿದಾಗ ಹಾಲ್‍ನಲ್ಲಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದರು. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ವೇಣುಗೋಪಾಲ್ ಸರಿತಾ ಕೊಠಡಿಗೆ ಬಂದಾಗ ಒತ್ತಾಯಪೂರ್ವಕವಾಗಿ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೇಣುಗೋಪಾಲ್ ಬಲವಂತವಾಗಿ ದೈಹಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆದ ಬಳಿಕ ಸರಿತಾಗೆ 5 ದಿನ ನಡೆಯಲೂ ಸಾಧ್ಯವಾಗಲಿಲ್ಲ. ಎದ್ದುನಿಂತುಕೊಳ್ಳಲೂ ಸಾಧ್ಯವಾಗಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸರಿತಾ ಬಳಿ ಸಾಕ್ಷ್ಯಗಳಿದ್ದು, ಇದಾದ ಬಳಿಕವೂ ಫೋನ್ ಕಾಲ್ ಹಾಗೂ ಎಸ್‍ಎಂಎಸ್ ಮೂಲಕ ದೌರ್ಜನ್ಯ ನಡೆಯುತ್ತಿತ್ತು ಎನ್ನುವ ಅಂಶ ವರದಿಯಲ್ಲಿದೆ.
ಕೆಸಿ ವೇಣುಗೋಪಾಲ್ ಬೆದರಿಸಿ ನನ್ನನ್ನು ಸೆಕ್ಸ್ ಗೆ ಬಳಸಿಕೊಂಡಿದ್ದಾರೆ. ಟೆಲಿಫೋನ್ ಕಾಲ್, ಎಸ್‍ಎಂಎಸ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಎಲ್ಲ ನನ್ನ ಬಳಿ ಸಾಕ್ಷ್ಯವಿದೆ ಎಂದು ಆಯೋಗದ ಮುಂದೆ ಸರಿತಾ ನಾಯರ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ವರದಿ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ, ಇದು ಸೋಲಾರ್ ತನಿಖಾ ಆಯೋಗದ ವರದಿಯೋ ಅಥವಾ ಸರಿತಾ ನಾಯರ್ ಹೇಳಿಕೆಯ ವರದಿಯೋ ಎಂದು ಪ್ರಶ್ನಿಸಿದ್ದಾರೆ. ವರದಿಯಲ್ಲಿರುವ ಎಲ್ಲ ಅಂಶಗಳು ಈ ಹಿಂದೆ ಸರಿತಾ ಬರೆದ ಪತ್ರದಲ್ಲಿತ್ತು. ಈ ವರದಿಯಲ್ಲಿ ಏನೂ ವಿಶೇಷ ಅಂಶಗಳಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ಹಿಂದಿನ ಯುಡಿಎಫ್ ಸರಕಾರದ ಆಡಳಿತದ ವೇಳೆ ನಡೆದ ಸೋಲಾರ್ ಭ್ರಷ್ಟಾಚಾರ ಹಗರಣದ ನ್ಯಾಯಾಂಗ ತನಿಖೆಯನ್ನು ಜಸ್ಟೀಸ್ ಜಿ. ಶಿವರಾಜನ್ ನಡೆಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ, ವಿದ್ಯುತ್ ಖಾತೆ ಸಚಿವ ಆರ್ಯಾಡನ್ ಮುಹಮ್ಮದ್, ಸೋಲಾರ್ ಪ್ಯಾನಲ್ ಪೂರೈಕೆಯ ಪ್ರಧಾನ ಸೂತ್ರಧಾರಿ ಸರಿತಾ ಎಸ್. ನಾಯರ್, ಆಕೆಯ ಪತಿ ಬಿಜು ರಾಧಾಕೃಷ್ಣನ್ ಸೇರಿದಂತೆ ಹಲವರು ಈ ಹೇಳಿಕೆ ನೀಡಿದ್ದರು.
ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಯಾರ ವಿರುದ್ಧ ಹೇಳಿಕೆ ನೀಡಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದರು.
ಆರೋಪಿ ಸರಿತಾ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ನ್ಯಾಯಾಂಗ ಆಯೋಗ ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಈಗ ಮುಂದಾಗಿದೆ.