ತಿರುನಂತರಪುರಂ: ನರಬಲಿ (Human Sacrifice) ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ (Kerala Government) ಮಾಟ, ಮಂತ್ರಗಳ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.
ಅಲ್ಲದೇ ಮಾಟ, ಮಂತ್ರಗಳ ತಡೆಗೆ ಪ್ರಸ್ತುತವಾಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವೆಡೆ ರಸ್ತೆ ಸಂಚಾರ ಬಂದ್
ಗುರುವಾರವಷ್ಟೇ ನರಬಲಿಗೆ ಕಾರಣವಾಗಿದ್ದ ಮಂತ್ರವಾದಿಯನ್ನ ಕೋರ್ಟ್ (Court) ಒಪ್ಪಿಸಲಾಗಿದೆ. ಮಾಟ, ಮಂತ್ರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ದಂಪತಿಯನ್ನ ಬಂಧಿಸಲಾಗಿದೆ.
ಏನಿದು ನರಬಲಿ ಪ್ರಕರಣ?
ಹಣಕ್ಕಾಗಿ ಇಬ್ಬರು ಮಹಿಳೆಯರನ್ನ ನರಬಲಿ ಕೊಟ್ಟಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು ನರಬಲಿ ನೀಡಿದ್ದರು. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್, ಪದ್ಮಾ ಹಾಗೂ ರೋಸ್ಲಿನ್ ಅನ್ನು ಅಪಹರಿಸಿದ್ದ. ಘಟನೆಗೆ ಸಂಬಂಧಿಸಿ ಸೆ. 26ರಂದು ಪ್ರಕರಣ (FIR) ದಾಖಲಾಗಿತ್ತು. ಇದನ್ನೂ ಓದಿ: ಕಾಂತಾರ: ಬಾಲಿವುಡ್‌ನಲ್ಲಿ ಧೂಳ್, ತಮಿಳಿನ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಲೀಲಾ ಹಾಗೂ ಏಜೆಂಟ್ ಶಿಹಾಬ್‌ನನ್ನು ಪೊಲೀಸರು (Police) ಬಂಧಿಸಿದ್ದರು. ತನಿಖೆ ವೇಳೆ ಬಲಿಯಾದ ಮಹಿಳೆಯರ ದೇಹವು 56 ತುಂಡುಗಳಾಗಿದ್ದು, ನರಬಲಿಯ ಬಳಿಕ ನರಮಾಂಸವನ್ನೂ ಭಕ್ಷಣೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.