-ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ
ತಿರುವನಂತಪುರ: ಕುಡುಕರ ಆತ್ಮಹತ್ಯೆಯಿಂದ ಎಚ್ಚತ್ತಿರುವ ಕೇರಳ ಸರ್ಕಾರ ಆನ್‍ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಿದೆ.
ಮದ್ಯ ಸಿಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಆತ್ಮಹತ್ಯೆಗೆ ಯತ್ನಿಸಿದವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕುಡಿತ ಚಟಕ್ಕೆ ಒಳಗಾದವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಅಬಕಾರಿ ಇಲಾಖೆಯಿಂದ ಚಿಕಿತ್ಸೆ ನೀಡಲಾಗುವವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Kerala govt also has asked Excise Dept to provide free treatment to and admit people with withdrawal symptoms to de-addiction centers. CM had said that the govt is also considering option of online sale of liquor as the sudden unavailability of alcohol may lead to social problems https://t.co/yQjTXADNeM
— ANI (@ANI) March 30, 2020
ಮದ್ಯದ ಸಂಗ್ರಹಣೆ ಇಲ್ಲದ ಕಾರಣ ಆನ್‍ಲೈನ್ ಮಾರಾಟದಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಕುಡುಕರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಕರ್ನಾಟಕದಲ್ಲಿಯೂ ಕುಡುಕರ ಅತ್ಮಹತ್ಯೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೀದರ್, ಹುಬ್ಬಳ್ಳಿಯಲ್ಲಿ ಒಬ್ಬರು ಮದ್ಯ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರಿನಲ್ಲೊಬ್ಬ ಕತ್ತು ಕೊಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ. ಎಣ್ಣೆಗಾಗಿ ಒಟ್ಟು ನಾಲ್ಕು ಸಾವಿನ ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆಯಲ್ಲಿ ಎಣ್ಣೆ ಬೇಕು ಅಂತ ಊರೆಲ್ಲಾ ಅಲೆದು ಸುಸ್ತಾಗಿ, ಕೊನೆಗೆ ಅಂಗಡಿವೊಂದರ ಶೆಟರ್ ತೆಗೆಯುವ ಸಾಹಸಕ್ಕೆ ಕುಡುಕನೊಬ್ಬ ಮುಂದಾಗಿದ್ದನು. ಅದು ಸಾಧ್ಯವಾಗದೆ ಕೋಲಿನಿಂದ ಗೋಡೆಗೆ ಹೊಡೆದು ಆಕ್ರೋಶ ಹೊರಹಾಕಿದ್ದಾನೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಮಂಜುನಾಥ್ ಎಂಬಾತ, ಆರಡಿ ದೂರ ನಿಂತು ಎಣ್ಣೆ ಖರೀದಿಸುತ್ತೇವೆ. ಬೆಳಗ್ಗೆ 9 ರಿಂದ 12ರವರೆಗೆ ಎಂಎಸ್‍ಐಎಲ್ ಓಪನ್ ಮಾಡಿ ಅಂತ ಸಿಎಂ ಹಾಗೂ ಅಬಕಾರಿ ಸಚಿವರಿಗೆ ವಾಟ್ಸಾಪ್ ಮೂಲಕ ಮನವಿ ಮಾಡಿದ್ದಾರೆ. ಮೈಸೂರಿನ ಧನಗಳ್ಳಿಯ ಡಿ.ಸಾಲುಂಡಿ ಗ್ರಾಮದ ಕೃಷಿ, ಕೂಲಿ ಕಾರ್ಮಿಕರು, ಮದ್ಯದಂಗಡಿ ತೆರೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಎಣ್ಣೆ ಇಲ್ಲದೇ ನಾವು ಕೆಲಸ ಮಾಡಕಾಗಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.