ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಕಾಲೇಜು ಶಿಕ್ಷಣ ಪಡೆಯಲು ಮೀನು ಮಾರಾಟ ಮಾಡಿ ಟ್ರೋಲ್ ಆಗಿದ್ದ ಹಾನನ್ ಹಮೀದ್ ಎಂಬ ಯುವತಿ ಕೇರಳ ಪ್ರವಾಹ ಸಂತ್ರಸ್ತ ನಿಧಿಗೆ 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾನನ್ ಹಮೀದ್, ಜನರು ತನಗಾಗಿ ನೀಡಿದನ್ನು ದೇಣಿಗೆಯಾಗಿ ನೀಡಿದ್ದೇನೆ. ನನಗೆ ಸಹಾಯ ಮಾಡಿದ ಹಲವು ಮಂದಿ ಸದ್ಯ ಸಂಕಷ್ಟದಲ್ಲಿದ್ದು. ಅವರ ಸಹಾಯವನ್ನು ಹಿಂದಿರುಗಿಸುವ ಅಗತ್ಯವಿದೆ. ನನ್ನಿಂದ ಇದನ್ನಷ್ಟೇ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ನಾನು ಈ ಹಣವನ್ನು ನೇರ ಸಿಎಂ ಅವರ ನಿಧಿಗೆ ವರ್ಗಾಹಿಸುತ್ತಿದ್ದೆ. ಆದರೆ ಸದ್ಯ ಮೊಬೈಲ್ ಹಾಗೂ ಬ್ಯಾಕಿಂಗ್ ಸೇವೆ ಲಭ್ಯವಿಲ್ಲ. ಅದ್ದರಿಂದ ನೇರ ಸಿಎಂ ಬಳಿ ತೆರಳಿ ಚೆಕ್ ನೀಡಲಿದ್ದೆನೆ. ನಾನಿರುವ ಪ್ರದೇಶದಲ್ಲಿ ಓಡಾಟ ನಡೆಸಲು ಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಹಲವರ ಮನೆ ಕೊಚ್ಚಿ ಹೋಗಿದೆ, ಆದರೆ ನನಗೆ ಆ ಸಮಸ್ಯೆ ಇಲ್ಲ. ಏಕೆಂದರೆ ಪ್ರವಾಹದಲ್ಲಿ ಕೊಚ್ಚಿ ಹೋಗಲು ತಮಗೆ ಮನೆಯೇ ಇಲ್ಲ ಎಂದು ಹೇಳಿದ್ದಾರೆ.
ಅಂದಹಾಗೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಕಾಲೇಜು ಸಮವಸ್ತ್ರ ಧರಿಸಿ ಮೀನು ಮಾರಾಟ ಮಾಡುತ್ತಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು. ಬಳಿಕ ಶಿಕ್ಷಣಕ್ಕೆ ನೆರವು ಮಂದಿ ಮುಂದೇ ಬಂದು ಸಹಾಯದ ಅಸ್ತ ಚಾಚಿದ್ದರು. ಬಡ ಕುಟುಂಬ ಯುವತಿಯಾಗಿರುವ ಹಮೀದ್ ತನ್ನ ತಾಯಿ ಹಾಗೂ ತಮ್ಮನ ಜೊತೆ ಜೀವನ ನಿರ್ವಹಣೆ ಹಾಗೂ ಶಿಕ್ಷಣಕ್ಕಾಗಿ ಕಾಲೇಜು ಮುಗಿದ ಬಳಿಕ ಸಣ್ಣ ಸಣ್ಣ ಕೆಲಸ ಮಾಡುತ್ತಾ ಹಣ ಗಳಿಸಿ ತಾಯಿಗೆ ನೆರವಾಗುತ್ತಿದ್ದರು. ಈ ವೇಳೆ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv