CrimeInternationalLatestMain Post

ಕೇರಳ ಮೂಲದ ಬಾಲಕಿ ದೋಹಾದ ಶಾಲಾ ಬಸ್ಸಿನೊಳಗೆ ಉಸಿರುಗಟ್ಟಿ ಸಾವು

ದೋಹಾ: ಕೇರಳ(Kerala) ಮೂಲದ 4 ವರ್ಷದ ಬಾಲಕಿ ಶಾಲಾ ಬಸ್‌(School Bus)ನೊಳಗೆ ವಿಪರೀತ ಬಿಸಿಲಿನಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕತಾರ್‌ನ(Qatar) ದೋಹಾ(Doha)ದಲ್ಲಿ ನಡೆದಿದೆ.

ಮಿನ್ಸಾ ಮರಿಯಮ್ ಜಾಕೋಬ್ ಎಂದು ಗುರುತಿಸಲಾದ ಬಾಲಕಿ ಸ್ಪ್ರಿಂಗ್‌ಫೀಲ್ಡ್ ಶಾಲಾ ಬಸ್‌ನೊಳಗೆ ಮಲಗಿದ್ದಳು ಎನ್ನಲಾಗಿದೆ. ಬಸ್‌ನ ಸಿಬ್ಬಂದಿ ಬಾಲಕಿ ಅದರಲ್ಲಿ ಮಲಗಿದ್ದುದನ್ನು ಗಮನಿಸದೇ ಪಾರ್ಕಿಗ್ ಪ್ರದೇಶದಲ್ಲಿ ಬಿಟ್ಟು, ಲಾಕ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದ. ಬಳಿಕ ಮಧ್ಯಾಹ್ನ ಬಸ್‌ನ ಬಾಗಿಲು ತೆರೆದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ನೋಡಿದ್ದಾನೆ. ಇದನ್ನೂ ಓದಿ: ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

ಕೂಡಲೇ ಆಕೆಯನ್ನು ಅಲ್ ವಕ್ರಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ವಿಪರೀತ ಬಿಸಿಲಿನಿಂದಾಗಿ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ದೋಹಾದ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಸಂತಾಪ ಸೂಚಿಸಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಾಹನದಲ್ಲಿ ಕುಳಿತಿದ್ದ ಪೊಲೀಸರ ಮುಂದೆಯೇ ಕಳ್ಳತನ- ಖದೀಮನಿಗೆ ಜನ ಗೂಸಾ ಕೊಟ್ರೂ ಡೋಂಟ್‍ಕೇರ್!

Live Tv

Leave a Reply

Your email address will not be published.

Back to top button