ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

Public TV
1 Min Read
kerala gay photoshoot 4

ತಿರುವನಂತಪುರಂ: ಇತ್ತೀಚೆಗೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಸಖತ್ ಟ್ರೆಂಡ್ ಆಗಿದ್ದು, ಮದುವೆಗೆ ಮುನ್ನ ಫೋಟೋಶೂಟ್ ಮಾಡಿಸಿಕೊಳ್ಳಲು ಅನೇಕ ಜೋಡಿಗಳು ಖುಷಿಪಡುತ್ತಾರೆ. ಹಾಗೆಯೇ ಇತ್ತೀಚೆಗೆ ಕೇರಳದ ಸಲಿಂಗಿ ಜೋಡಿಯೊಂದು ಮಾಡಿಸಿರುವ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಲ್ಲೆಡೆ ವೈರಲ್ ಆಗಿದೆ.

kerala gay photoshoot 1

ಕೇರಳ ಮೂಲದ ಸಲಿಂಗ ಜೋಡಿ ಅಬ್ದುಲ್ ರೆಹಿಮ್ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಜೋಡಿ ನೀಡಿರುವ ರೊಮ್ಯಾಂಟಿಕ್ ಪೋಸ್‍ಗಳು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಎಲ್ಲರು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನಮಗೂ ಎಲ್ಲರಂತೆ ಖುಷಿ ಖುಷಿಯಾಗಿ ಮದುವೆ ಆಗಬೇಕು ಎನ್ನುವ ಆಸೆ ಇದೆ. ಅದಕ್ಕೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡಿದ್ದೇವೆ ಎಂದು ಸಲಿಂಗಿಗಳು ಹೇಳಿದ್ದಾರೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

kerala gay photoshoot 5

ತಮ್ಮ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇವರ ಫೋಟೋಗಳನ್ನು ನೋಡಿ ನೆಟ್ಟಿಗರು ಕೂಡ ಖುಷಿಪಟ್ಟಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

ಈ ಸಲಿಂಗ ಜೋಡಿ ತಮ್ಮ ಸಾಕು ನಾಯಿಗಳ ಜೊತೆ ಕೂಡ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ಫೋಟೋಶೂಟ್‍ಗೆ ನೆಟ್ಟಿಗರು ಮನಸೋತಿದ್ದಾರೆ.

kerala gay photoshoot 7

ಕಳೆದ 5 ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು 377 ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಬ್ಬರೂ ಮದುವೆಯಾಗಲು ಇಚ್ಛಿಸಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಅಬ್ದುಲ್ ಮತ್ತು ನೆವಿದ್ ವಿವಾಹವಾಗುತ್ತಿದ್ದಾರೆ.

ಈ ಸಲಿಂಗ ಜೋಡಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ, ಆದರೆ ಮದುವೆ ದಿನಾಂಕವನ್ನು ನಿಗದಿಗೊಳಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *