ತಿರುವನಂತಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಲ್ವರು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಾರ್ಯಕರ್ತರು ಭಾನುವಾರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ಬಿಜೆಪಿಯ ಸಮಾವೇಶದಲ್ಲಿ ಭಾಗಿಯಾಗಿದ್ದರು. ಕಾರ್ಯಕರ್ತರ ಮೇಲೆ ಹರಿತವಾದ ಶಸ್ತ್ರಗಳಿಂದ ಮುಖದ ಭಾಗದಲ್ಲಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದವನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‍ಪಿ ಮನ್ ಸಿಂಗ್ ತಿಳಿಸಿದ್ದಾರೆ.
Advertisement
Advertisement
ತಿರುವನಂತಪುರ ಮೇಯರ್ ವಿ.ಕೆ.ಪ್ರಶಾಂತ್ ಅವರ ಮೇಲಿನ ದಾಳಿಯ ನಂತರ ಈ ಹಲ್ಲೆ ನಡೆದಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಪ್ರಶಾಂತ್ ಮೇಲಿನ ದಾಳಿ ಆರ್‍ಎಸ್‍ಎಸ್ ನವರ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
Advertisement
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೇಯರ್ ಪ್ರಶಾಂತ್‍ರನ್ನು ಭೇಟಿ ಬಳಿಕ, ಪ್ರಶಾಂತ್ ಮೇಲಿನ ದಾಳಿ ಉದ್ದೇಶಪೂರ್ವಕವಾದದ್ದು ಎಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.
Advertisement
ಇತ್ತೀಚೆಗೆ ಆರ್‍ಎಸ್‍ಎಸ್ ಕಾರ್ಯಕರ್ತ 28 ವರ್ಷದ ವಾಡೆಕೆತಲಾ ಆನಂದನ್ ಎಂಬವರನ್ನು ಕೊಲೆ ಮಾಡಲಾಗಿತ್ತು. ಆನಂದನ್ ಸಿಪಿಎಂ ಪಕ್ಷದ ಸದಸ್ಯ ಮೊಹಮ್ಮದ್ ಕಾಸಿಮ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
Kerala: Four #RSS workers attacked in Kannur, admitted to hospital pic.twitter.com/ZYmKq0U7kX
— ANI (@ANI) November 20, 2017
Strongly condemn the violence unleashed by BJP councillors & RSS workers (with criminal records) against Thiruvananthapuram Mayor Com. V K Prashanth and caused serious injuries to his neck. Wish him a speedy recovery. Strict action will be taken against the accused. pic.twitter.com/JNSGn2AwPb
— Pinarayi Vijayan (@pinarayivijayan) November 19, 2017