ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 167ಕ್ಕೆ ಏರಿಕೆಯಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರ ಬಳಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಕೇರಳ ಮುಖ್ಯಮಂತ್ರಿ ಜೊತೆ ನೆರೆ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಅಲ್ಲದೇ ನಾನೇ ಬಂದು ಅಲ್ಲಿನ ಪರಿಸ್ಥಿತಿಗಳನ್ನು ಪರೀಶಿಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಹೇಳಿದ್ದಾರೆ. ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.
Advertisement
Kerala: Visuals of a flooded road in Alappuzha's Chunakkara village #KeralaFlood pic.twitter.com/bgm9iqSHXm
— ANI (@ANI) August 17, 2018
Advertisement
ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಿದ್ದಾರೆ.
ಕೊಚ್ಚಿನ್ನ ವಿಮಾನ ನಿಲ್ದಾಣದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸ್ಥಳದಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಕೇಂದ್ರ ವಿಮಾನಯಾನ ಖಾತೆಯ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ, ವಿಮಾನಯಾನ ಕಂಪೆನಿಗಳ ಜೊತೆ ಮಾತನಾಡಿದ್ದೇವೆ. ನೆರೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಕ್ಕೆ ತಲುಪಬೇಕಾಗಿರುವ ಸಾಮಾಗ್ರಿಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿರುವುದಕ್ಕೆ ವಿಮಾನಯಾನ ಕಂಪೆನಿಗಳಿಗೆ ಧನ್ಯವಾದವನ್ನು ಹೇಳಿದ್ದಾರೆ.
Had telephone conversation with Kerala CM P Vijayan just now.We discussed flood situation across the state&reviewed rescue operations. Later this evening,I'll be heading to Kerala to take stock of the unfortunate situation due to flooding, tweets PM Modi. #KeralaFloods (file pic) pic.twitter.com/iqEGK8ozuB
— ANI (@ANI) August 17, 2018
Spoke to Kerala CM Shri Pinarayi Vijayan again this morning. We discussed the flood situation in the state. Have asked Defence Ministry to further step up the rescue and relief operations across the state. Praying for the safety and well-being of the people of Kerala. @CMOKerala
— Narendra Modi (@narendramodi) August 16, 2018
We are receiving multiple repetitive rescue requests in CMO. Ensure that you add date and time along with exact location, any significant landmark, district, number of stranded people and contact number of victim in all new requests. #KeralaSOS
— CMO Kerala (@CMOKerala) August 17, 2018
Indian Coast Guard's rescue&relief team from Vandiperiyar has been shifted to the flood affected Manjumala village. The team has rescued 16 stranded people from the village. Food & dry ration has been distributed among them, rescue operation is underway. #KeralaFloods pic.twitter.com/K42bszAiHT
— ANI (@ANI) August 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv