ಚಿಕ್ಕಮಗಳೂರು: ಕೇರಳದ ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿ ತಿಂಗಳ ಬಳಿಕ ಎಂಜಿನಿಯರ್ ಪ್ರತ್ಯಕ್ಷವಾಗಿದ್ದಾರೆ.
ಎಂಜಿನಿಯರ್ ಸಂದೀಪ್ ಮುಂಬೈನ ಲಾಡ್ಜ್ ನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷನಾಗಿದ್ದಾರೆ. ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ಈಗ ಕೇರಳ ಪೊಲೀಸರಿಗೆ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಸಂದೀಪ್ ಪ್ರೇಯಸಿಯೂ ನಾಪತ್ತೆಯಾಗಿರುವ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಕೇರಳದ ಎಂಜಿನಿಯರ್ ನಾಪತ್ತೆ
ಏನಿದು ಪ್ರಕರಣ?
ಕೇರಳದ ಕ್ಯಾಲಿಕಟ್‍ನ ಖಾಸಗಿ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಆದರೆ ನವೆಂಬರ್ 28 ರಂದು ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ಪತ್ತೆಯಾಗಿತ್ತು. ನದಿ ದಡದ ದಂಡೆಯ ಮೇಲೆ ವಾಚ್, ಟವೆಲ್ ಕೂಡ ಪತ್ತೆಯಾಗಿದೆ. ಟ್ರಕ್ಕಿಂಗ್ ಸಲುವಾಗಿ ಬಂದಿದ್ದ ಅವರು ಮೂರು ದಿನಗಳ ಕಾಲ ಸ್ನೇಹಿತರ ಸಂಪರ್ಕದಲ್ಲಿದ್ದರು. ಕೊನೆ ದಿನದ ಸಂದೀಪ್ ನಾಪತ್ತೆಯಾಗಿದ್ದರು. ಸೇತುವೆ ಬಳಿ ವಾಚ್, ಟವೆಲ್ ಪತ್ತೆಯಾಗಿದ್ದರಿಂದ ಈಜಲು ಹೋಗಿ ನದಿಯಲ್ಲಿ ಮುಳುಗಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿತ್ತು.
ಈ ಬಗ್ಗೆ ಕೇರಳದ ನಲ್ಲಳಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಾಗಿದ್ದು, ಕೇರಳ ಪೊಲೀಸರು ಸಂದೀಪ್‍ಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಈಗ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv