– 5ನೇ ದಿನ ಗುಜರಾತ್ ವಿರುದ್ಧ 2 ರನ್ ಮುನ್ನಡೆ
– ಪಂದ್ಯ ಬಹುತೇಕ ಡ್ರಾಗೊಳ್ಳುವ ಸಾಧ್ಯತೆ
ಅಹಮದಾಬಾದ್: ರಣಜಿ ಟ್ರೋಫಿ (Ranji Trophy) ಸೆಮಿ ಫೈನಲ್‌ನಲ್ಲಿ ಗುಜರಾತ್ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ (Kerala Ranaji Team) 74 ವರ್ಷಗಳ ಬಳಿಕ ರಣಜಿ ಫೈನಲ್ ತಲುಪುವ ಸನಿಹದಲ್ಲಿದೆ.
JUBILATION FOR KERALA. 🚀
– A Ranji Final’s entry by the barest of margin!! 🤯pic.twitter.com/85b3T6jlJ7
— Mufaddal Vohra (@mufaddal_vohra) February 21, 2025
Advertisement
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ 187 ಓವರ್‌ಗಳಲ್ಲಿ 457 ರನ್ ಗಳಿಸಿದ್ರೆ, ಗುಜರಾತ್ 174.4 ಓವರ್‌ಗಳಲ್ಲಿ 455 ರನ್‌ಗಳಿಗೆ ಆಲೌಟ್ ಅಯಿತು. ಇದರಿಂದ 2 ರನ್‌ಗಳ ಮುನ್ನಡೆ ಕಾಯ್ದುಕೊಂಡ ಕೇರಳ ತಂಡ ಫೈನಲ್ ತಲುಪುವ ಹೊಸ್ತಿಲಲ್ಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ ಹಿಂದಿಕ್ಕಿದ ರೋಹಿತ್ ಶರ್ಮಾ – 11,000 ರನ್ ಪೂರೈಸಿ ದಾಖಲೆ
Advertisement
Advertisement
ಸೆಮಿಸ್‌ನ 5ನೇ ದಿನವಾದ ಇಂದು ಉಭಯ ತಂಡಗಳ 2ನೇ ಇನ್ನಿಂಗ್ಸ್ ಬಾಕಿಯಿದೆ. ಆದ್ರೆ ಕೊನೆಯ ದಿನ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಕಡಿಮೆಯಿರುವುದರಿಂದ ಕೇರಳ ಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ. ಇದು ಕೇರಳ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ದೊಡ್ಡ ಮೈಲುಗಲ್ಲಾಗಿದೆ. ಇದನ್ನೂ ಓದಿ: ಗಿಲ್ ಶತಕದಾಟ, ಶಮಿ ಬೆಂಕಿ ಬೌಲಿಂಗ್ – ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ
Advertisement
ಕೊನೆಯ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿರುವ ಕೇರಳ ತಂಡ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿ ಒಟ್ಟಾರೆ 28 ರನ್‌ಗಳ ಮುನ್ನಡೆಯಲ್ಲಿದೆ. ಗುಜರಾತ್ (Gujarat) ತಂಡಕ್ಕೆ ತನ್ನ 2ನೇ ಇನ್ನಿಂಗ್ಸ್ ಬಾಕಿಯಿದೆ, ಆದ್ರೆ ಇಂದು ಕೊನೆಯ ದಿನ ಆದ್ದರಿಂದ ಫಲಿತಾಂಶ ಪ್ರಕಟವಾಗುವುದು ಅಸಾಧ್ಯವಾಗಿದೆ.
ರಣಜಿ ಪಂದ್ಯದ ಫಲಿತಾಂಶ ಹೇಗೆ ನಿರ್ಧಾರವಾಗುತ್ತೆ?
ಸಹಜವಾಗಿ ರೌಂಡ್ ರಾಬಿನ್ (ಲೀಗ್ ಸುತ್ತಿನ ಪಂದ್ಯ) ಪಂದ್ಯಗಳು 4 ದಿನ ನಡೆಯುತ್ತದೆ. ನಾಕೌಟ್ ಪಂದ್ಯಗಳು ಟೆಸ್ಟ್ ಕ್ರಿಕೆಟ್‌ನಂತೆ 5 ದಿನ ಇರಲಿದೆ. ನಾಕೌಟ್ ಪಂದ್ಯದಲ್ಲಿ ಫಲಿತಾಂಶ ಹೊರಬೀಳದಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಸಾಧಿಸಿದ ಕೇರಳ ತಂಡ ಫೈನಲ್ ತಲುಪಲಿದೆ. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?