– ವಿದೇಶದಿಂದ ಮಾರ್ಚ್ 2 ರಂದು ಮರಳಿದ್ದ ವೈದ್ಯ
– ಭಾನುವಾರ ನಡೆಸಿದ ಎರಡನೇ ಪರೀಕ್ಷೆಯಲ್ಲಿ ದೃಢ
ತಿರುವನಂತಪುರಂ: ಕೇರಳದ ವೈದ್ಯರೊಬ್ಬರಿಗೆ ಕೊರೊನಾ ಬಂದಿದ್ದು ಈಗ ಆಸ್ಪತ್ರೆಗೆ 30 ಮಂದಿ ಸಿಬ್ಬಂದಿ ಮೇಲೆ ನಿಗಾ ಇಡಲಾಗಿದೆ.
ತಿರುವನಂತಪುರದ ಶ್ರೀ ಚಿತ್ರ ತಿರುನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ ಮತ್ತು ಟೆಕ್ನಾಲಜಿಯ ವೈದ್ಯರೊಬ್ಬರು ಮಾರ್ಚ್ 1 ರಂದು ಸ್ಪೇನ್ ದೇಶದಿಂದ ಬಂದಿದ್ದರು. ಭಾನುವಾರ ಈ ವೈದ್ಯರ ಫಲಿತಾಂಶದಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ವೈದ್ಯರ ಜೊತೆ ಇವರ ಸಂಪರ್ಕಕ್ಕೆ ಬಂದ ಎಲ್ಲ ವೈದ್ಯ ಸಿಬ್ಬಂದಿಯನ್ನು ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ.
Advertisement
Advertisement
ಮಾರ್ಚ್ 2 ರಂದು ಈ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಮಾರ್ಚ್ 8 ರಂದು ಗಂಟಲು ನೋವಿನ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದರು.
Advertisement
ಕರ್ತವ್ಯದ ವೇಳೆ ಮಾಸ್ಕ್ ಧರಿಸಿದ್ದ ಇವರು ಮಾರ್ಚ್ 10, 11 ರಂದು ರೋಗಿಗಳ ತಪಾಸಣೆ ಸಹಾ ಮಾಡಿದ್ದರು. ನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ಮಾರ್ಚ್ 14 ರಂದು ಮತ್ತೆ ಕೊರೊನಾ ಪರೀಕ್ಷೆ ನಡೆಸಿದಾಗ ಭಾನುವಾರ ಪಾಸಿಟಿವ್ ಫಲಿತಾಂಶ ಬಂದಿದೆ.
Advertisement
ತಿರುವನಂತಪುರದ ದೊಡ್ಡ ವೈದ್ಯಕೀಯ ಸಂಸ್ಥೆ ಇದಾಗಿದ್ದು ಉಳಿದ ವೈದ್ಯರನ್ನು ಕರ್ತವ್ಯದಿಂದ ತೆರವುಗೊಳಿಸಿ ನಿಗಾ ಇರಿಸಿದ ಕಾರಣ ನಿತ್ಯದ ಸೇವೆಗೆ ಕೆಲ ಸಮಸ್ಯೆಯಾಗಿದೆ.