ತಿರುವನಂತಪುರಂ: ಪೌರತ್ವ ಕಾಯ್ದೆ(ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್‌ಸಿ) ವಿರೋಧಿಸಿ ಕೇರಳದ ದಂಪತಿ ಮಾಡಿಸಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.
ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಸುಂದರ ಲೊಕೆಷನ್‍ನಲ್ಲಿ ದಂಪತಿ ಫೋಟೋಗಳಿಗೆ ಪೋಸ್‍ಕೊಟ್ಟು ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಆದರೆ ಕೇರಳದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ದಂಪತಿ ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ. ಸುಂದರವಾದ ಪೊನ್ಮುಡಿ ಬೆಟ್ಟದ ಮುಂಭಾಗ ‘ಸಿಎಎ ಬೇಡ’, ‘ಎನ್ಆರ್‌ಸಿ ಬೇಡ’ ಎಂಬ ಫಲಕಗಳನ್ನು ಹಿಡಿದು ಕೇರಳ ದಂಪತಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಫೇಸ್‍ಬುಕ್‍ನಲ್ಲಿ ದಂಪತಿ ಹಂಚಿಕೊಂಡಿದ್ದು, ಸಿಎಎ, ಎನ್ಆರ್‌ಸಿ ವಿರೋಧಿಸಿದ ಪ್ರೀ-ವೆಡ್ಡಿಂಗ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ
Advertisement
Advertisement
ಡಿಸೆಂಬರ್ 18ರಂದು ‘ಫಸ್ಟ್ ಲುಕ್ ಫೋಟೋಗ್ರಾಫಿ’ ಹೆಸರಿನ ಫೇಸ್‍ಬುಕ್ ಖಾತೆಯಿಂದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ಅವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ನಂತರ ಈ ಫೋಟೋಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದು, ಈ ಫೋಟೋಶೂಟ್ ಪರ ಹಾಗೂ ವಿರೋಧ ಕಮೆಂಟ್‍ಗಳು ವ್ಯಕ್ತವಾಗಿದೆ. ಆದರೆ ಎಲ್ಲೆಡೆ ಪ್ರತಿಭಟನೆ, ಗಲಾಟೆಗಳು ಮಾಡುವ ಮೂಲಕ ಸಿಎಎ, ಎನ್ಆರ್‌ಸಿ ವಿರೋಧಿಸುತ್ತಿರುವ ಜನರ ನಡುವೆ ಈರೀತಿ ವಿನೂತನವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ ದಂಪತಿ ಫೋಟೋಗಳು ಎಲ್ಲರ ಗಮನ ಸೆಲೆದಿದೆ. ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್
Advertisement
Advertisement
ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸ್‍ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ. ಫಸ್ಟ್ ಲುಕ್ ಫೋಟೋಗ್ರಾಫಿಯ ಪಾರ್ಟ್‍ನರ್ ಆಗಿರುವ ಅರ್ಜುನ್ ಎಪಿ ಅವರು ಈ ಫೋಟೋಶೂಟ್ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಯ ಈ ವಿಶೇಷ ಫೋಟೋಶೂಟ್‍ಗೆ ನಾವು ಐಡಿಯಾ ಕೊಟ್ಟಿದ್ದು, ಆದರೆ ದಂಪತಿ ಖುಷಿಯಿಂದ ಈ ಐಡಿಯಾವನ್ನು ಒಪ್ಪಿಕೊಂಡು ಸಹಕರಿಸಿದರು. ನಾವು ಫೇಸ್‍ಬುಕ್ ಪೋಸ್ಟ್ ಟ್ಯಾಗ್‍ಲೈನ್ ಹಾಕಿದಂತೆ ಇವರು ಜವಾಬ್ದಾರಿ ಇರುವ ದಂಪತಿ ಎಂದು ತಿಳಿಸಿದರು.