ತಿರುವನಂತಪುರಂ: ತಾಯಿಯಿಂದ ಬೇರ್ಪಟ್ಟಿದ್ದ ಮಗುವಿಗೆ (Infant) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Police Officer) ಹಾಲುಣಿಸಿ (Breastfeed) ಮಾನವೀಯತೆ ಮೆರೆದಿರುವುದಕ್ಕೆ ಕೇರಳ ಪೊಲೀಸ್ (Kerala Police) ಮುಖ್ಯಸ್ಥ ಅನಿಲ್ ಕಾಂತ್ ಅವರು ಪೇದೆಗೆ ಸನ್ಮಾನಿಸಿದ್ದಾರೆ.
ಕೋಝಿಕ್ಕೋಡ್ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಆರ್ ರಮ್ಯಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಪ್ರಧಾನ ಕಚೇರಿಗೆ ಆಹ್ವಾನಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ವರದಿಗಳ ಪ್ರಕಾರ, ಶನಿವಾರ ಬೆಳಗ್ಗೆ ಮಗುವಿನ (Baby) ತಾಯಿ ತನ್ನ 12 ದಿನದ ಮಗು ಕಾಣೆಯಾಗಿದೆ ಎಂದು ಚೆವಾಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿ, ತಂದೆ ಮಗುವನ್ನು ಹಿಡಿದುಕೊಂಡು ಹೋಗಿದ್ದಾನೆ. ಬಳಿಕ ಆತ ಮಗುವನ್ನು ಹಿಡಿದುಕೊಂಡು ಬೆಂಗಳೂರಿಗೆ ಕೆಲಸಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ವಯನಾಡು ಗಡಿಯಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತ ಮಗುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೊರಗೆ ಬರದಿದ್ರೆ ಕಾಲು ಮುರಿಯುತ್ತೇವೆ- SFI ಕಾರ್ಯಕರ್ತರಿಂದ ಪ್ರಾಂಶುಪಾಲರಿಗೆ ಧಮ್ಕಿ
ಬಳಿಕ ಪೊಲೀಸರು ಹಸಿವಿನಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರು. ಶಿಶುವಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ವೇಳೆ ಆಸ್ಪತ್ರೆ ತಲುಪಿದ ರಮ್ಯಾ ಮಗುವಿಗೆ ಹಾಲುಣಿಸಲು ಮುಂದಾಗಿದ್ದಾರೆ. ಅದೇ ದಿನ ಸಂಜೆ ಮಗು ತಾಯಿಯ ಮಡಿಲು ಸೇರಿದೆ.
ರಮ್ಯಾ ಅವರು ಕೋಝಿಕ್ಕೋಡ್‌ನ ಚಿಂಗಪುರಂ ಮೂಲದವರಾಗಿದ್ದು, 4 ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರಿದ್ದಾರೆ. ಮಹಿಳಾ ಬೆಟಾಲಿಯನ್‌ನ 2ನೇ ಬ್ಯಾಚ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಅವರು, ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನ 4ನೇ ತಂಡದಲ್ಲಿ ಸೇವೆ ಸಲ್ಲಿಸಿದ್ದರು. ಹೆರಿಗೆ ರಜೆಯ ನಂತರ ಅವರು ಚೆವಾಯೂರ್ ಪೊಲೀಸ್ ಠಾಣೆಗೆ ಸೇರಿದ್ದರು. 2 ಮಕ್ಕಳ ತಾಯಿಯಾಗಿರುವ ರಮ್ಯಾ ಅವರ ಪತಿ ಅಶ್ವಂತ್ ವಿಶ್ವನ್ ಶಾಲಾ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ʼನಮ್ಮ ಮೆಟ್ರೊʼದಿಂದ ಆನ್‌ಲೈನ್ ಟಿಕೆಟ್ ಲೋಕಾರ್ಪಣೆ – ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್