ತಿರುವನಂತಪುರಂ: ಈ ಹಿಂದೆ ಪರೀಕ್ಷೆ ಬರೆಯಲು ಹೋಗಿದ್ದಾಗ ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಮಹಿಳಾ ಪೊಲೀಸ್ ಸಮಾಧಾನ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇದೀಗ ಅಂಥದ್ದೇ ಮನಸ್ಸಿಗೆ ಮುಟ್ಟುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಕೊಚ್ಚಿಯಲ್ಲಿ (Kochi Kerala) ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಮಗುವಿಗೆ ಸ್ವತಃ ತಾವೇ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋಗಳ ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯ ತಂಡ ರಚನೆ
Advertisement
Advertisement
ಘಟನೆ ಏನು..?: ಬಿಹಾರ (Bihar) ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಆ ಬಳಿಕ ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಸದ್ಯ ಆರ್ಯ ಅವರ ಈ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಭೇಷ್ ಎಂದಿದ್ದಾರೆ.
Advertisement
Advertisement
ಈ ಸಂಬಂಧ ಆ ತಾಯಿಯ 13 ವರ್ಷದ ಹಿರಿಯ ಪುತ್ರಿ ಪ್ರತಿಕ್ರಿಯಿಸಿ, ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಬಿಟ್‌ಕಾಯಿನ್ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್ ಬ್ಲಾಸ್ಟ್ – ಬೆದರಿಕೆ
ಮಲಯಾಳಂ ಅನ್ನು ಚೆನ್ನಾಗಿ ಮಾತನಾಡುವ ಬಾಲಕಿಗೆ ಬಿಹಾರದಲ್ಲಿ ತಾವಿರುವ ಸ್ಥಳದ ಬಗ್ಗೆ ಗೊತ್ತಿಲ್ಲ ಎಂದಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಬಿಹಾರದಲ್ಲಿರುವ ಅವರ ಸಂಬಂಧಿಕರ ಪತ್ತೆಗೆ ಅಲ್ಲಿನ ಪೊಲೀಸರ ನೆರವು ಪಡೆಯುತ್ತಿದ್ದಾರೆ.