ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2016ರಲ್ಲಿ ದುಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡಿದ್ದಾರೆ ಎಂದು ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.
2020ರ ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕೊಚ್ಚಿಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಈ ರೀತಿಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗಾಂಧೀಜಿಯನ್ನು ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿವೆ: ಪಿಣರಾಯಿ ವಿಜಯನ್
Advertisement
Advertisement
ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಸ್ವಪ್ನಾ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ವಿಶೇಷ ನ್ಯಾಯಾಲಯವು ಆಕೆಯ ಹೇಳಿಕೆಯನ್ನು ದಾಖಲಿಸುವ ಸಲುವಾಗಿ ಎರ್ನಾಕುಲಂ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿಯೋಜಿಸಿತು.
Advertisement
Advertisement
ನ್ಯಾಯಾಲಯದಲ್ಲಿ ಗೌಪ್ಯ ಹೇಳಿಕೆ ನೀಡಿದ ಬಳಿಕ ಮಾಧ್ಯಮಗಳ ಮುಂದೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಕ್ರಮ ಹಣ ಸಾಗಣೆಯಲ್ಲಿ ಮುಖ್ಯಮಂತ್ರಿ, ಅವರ ಪತ್ನಿ, ಪುತ್ರಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಶಿವಶಂಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಾಗಿ ಆಕೆ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್
ನಾನು ಆ ಸಂರ್ಭದಲ್ಲಿ ತಿರುವನಂತರಪುರಂನಲ್ಲಿರುವ ಯುಎಇ ಕನ್ಸುಲೇಟ್‌ನಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಸಿಎಂಗೆ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್ ಮುಖ್ಯಮಂತ್ರಿಗಳಿಗೆ ಆದಷ್ಟು ಬೇಗ ಬ್ಯಾಗ್‌ವೊಂದನ್ನು ತಲುಪಿಸಬೇಕು ಎಂದು ಹೇಳಿ, ನೇರವಾಗಿ ಲಗೇಜ್ ಕ್ಲಿಯರೆನ್ಸ್ಗೆ ಕರೆದರು. ನಂತರ ಬ್ಯಾಗನ್ನು ಕನ್ಸುಲೇಟ್‌ನಲ್ಲಿರುವ ಯಂತ್ರದಲ್ಲಿ ಸ್ಕ್ಯಾನ್ ಮಾಡಲಾಯಿತು. ಈ ವೇಳೆ ಬ್ಯಾಗ್‌ನಲ್ಲಿ ಹಣ ಇರುವುದು ನನ್ನ ಗಮನಕ್ಕೆ ಬಂದಿತು ಎಂದು ಆರೋಪಿ ಸ್ವಪ್ನಾ ಸುರೇಶ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಶಿವಶಂಕರ್ ಸೂಚನೆಯಂತೆ ಹಲವು ಬಾರಿ ಸಿಎಂ ಅವರ ಅಧಿಕೃತ ನಿವಾಸ ಕ್ಲಿಪ್‌ಹೌಸ್‌ಗೆ ಬಿರಿಯಾನಿ ಪಾತ್ರೆಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಅದರಲ್ಲಿ ಬಿರಿಯಾನಿ ಮಾತ್ರವಲ್ಲದೆ ಕೆಲ ಲೋಹದ ವಸ್ತುಗಳೂ ಇದ್ದವೆಂದು ಆಕೆ ಆರೋಪಿಸಿದ್ದಾರೆ.