ತಿರುವನಂತಪುರಂ: ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಆರ್‌ಎಸ್‍ಎಸ್ ಮತ್ತು ಎಸ್‍ಡಿಪಿಐನಿಂದ ಸಾಧ್ಯವಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ಕಣ್ಣೂರಿನಲ್ಲಿ ಸಂಭವಿಸಿದ ವಿವಿಧ ಸ್ಫೋಟಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಶಾಂತಿ ಕದಡಲು ಕಾಂಗ್ರೆಸ್, ಆರ್‌ಎಸ್‍ಎಸ್ ಮತ್ತು ಎಸ್‍ಡಿಪಿಐಯಂತಹ ಉಗ್ರಗಾಮಿ ಶಕ್ತಿಗಳು ರಹಸ್ಯವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು
ಈ ಶಕ್ತಿಗಳು ಕೇರಳದ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಸಾಧ್ಯವಿಲ್ಲ. ಈ ಎರಡು ಕೋಮುವಾದಿ ಶಕ್ತಿಗಳು ಮತ್ತು ನಾಯಕತ್ವವನ್ನು ಎಸ್‍ಡಿಪಿಐ ಮತ್ತು ಆರ್‌ಎಸ್‍ಎಸ್ ನೀಡಿದೆ. ಯಾವುದೇ ಕೋಮುವಾದಿ ಶಕ್ತಿಯನ್ನು ಪ್ರೋತ್ಸಾಹಿಸುವುದು ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.