ತಿರುವನಂತಪುರಂ: ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರು ಕಲಾಪ ಹೊರತು ಪಡೆಸಿ ಉಳಿದ ಸಮಯದಲ್ಲಿ ಒಂದೇಕಡೆ ಇರುವುದು ಅಪರೂಪ. ಕೇರಳದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಬೆಳೆ ನಾಯಕರಿಬ್ಬರನ್ನು ಒಂದಾಗಿಸಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿಥಲ ಒಂದೇ ಹೆಲಿಕಾಪ್ಟರ್‍ನಲ್ಲಿ ವೈನಾಡಿಗೆ ಬಂದು, ಪ್ರವಾಹ ವಿಕ್ಷಣೆ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಭಾರೀ ಮಳೆಯಿಂದಾಗಿ ಅಲಲ್ಲಿ ಭೂಕುಸಿತ, ರಸ್ತೆಗಳೇ ಕೊಚ್ಚಿ ಹೋಗಿರೋದ್ದರಿಂದ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ. ಮಳೆಯ ಅಬ್ಬರಕ್ಕೆ 30 ಮಂದಿ ಮೃತಪಟ್ಟಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ಸರ್ಕಾರವು ವಿವಿಧ ಕ್ರಮಕೈಗೊಂಡಿದೆ.
Advertisement
Kerala CM Pinarayi Vijayan and leader of opposition Ramesh Chennithala arrive at Wayanad. #KeralaFloods pic.twitter.com/Dg3ko7u2Fm
— ANI (@ANI) August 11, 2018
Advertisement
ಇಡುಕ್ಕಿ ಡ್ಯಾಂನಿಂದ ನೀರು ಹರಿದು ಹಲವು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ. ಸೇನೆಯ 8 ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‍ನಿಂದ ಮೂರು ತುಕಡಿಗಳನ್ನು, ಬೆಂಗಳೂರಿನಿಂದ ಎರಡು, ಹೈದರಾಬಾದ್‍ನಿಂದ ಒಂದು ತುಕಡಿಯನ್ನು ಕೇರಳಕ್ಕೆ ಕಳುಹಿಸಲಾಗಿದೆ. ಈ ನಡುವೆ, ವಯನಾಡ್ ಜಿಲ್ಲೆಯ ಪನಮರಮ್‍ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಸುಮಾರು 50 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಇತ್ತ ರಾಜ್ಯ ಸರ್ಕಾರವು ಸಕೇರಳಕ್ಕೆ 10 ಕೋಟಿ ರೂ. ನೀಡಿ ಸಹಾಯಹಸ್ತ ನೀಡಿದೆ.