ತಿರುವನಂತಪುರಂ: ಐತಿಹಾಸಿಕ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ (BJP) ರಾಜ್ಯ ಕಾರ್ಯದರ್ಶಿ ಹಾಗೂ ಕೊಡಂಗನೂರು ವಾರ್ಡ್ ಕೌನ್ಸಿಲರ್ ವಿ.ವಿ ರಾಜೇಶ್ ತಿರುವನಂತಪುರಂ ಪಾಲಿಕೆ ಮೇಯರ್ (Thiruvananthapuram Corporation Mayor) ಆಗಿ ಆಯ್ಕೆಯಾಗಿದ್ದಾರೆ. 51 ಮತಗಳನ್ನ ಗಳಿಸುವ ಮೂಲಕ ರಾಜೇಶ್ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಎಲ್‌ಡಿಎಫ್‌ನ (LDF) 45 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿ ಎನ್‌ಡಿಎ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿತು. ತಿರುವನಂತಪುರಂನ 101 ವಾರ್ಡ್‌ಗಳ ಪೈಕಿ ಬಿಜೆಪಿ 50 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿತ್ತು. ಇಂದು 101 ಸದಸ್ಯರ ನಿಗಮದಲ್ಲಿ ರಾಜೇಶ್ (VV Rajesh) 50 ಬಿಜೆಪಿ ಕೌನ್ಸಿಲರ್ ಹಾಗೂ ಓರ್ವ ಸ್ವತಂತ್ರ ಸದಸ್ಯರ ಬೆಂಬಲ ಪಡೆಯುವ ಮೂಲಕ ಮೇಯರ್ ಪಟ್ಟಕ್ಕೇರಿದರು. ಇದನ್ನೂ ಓದಿ: ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್ – ಗ್ರಾಪಂ, ಬ್ಲಾಕ್, ಪುರಸಭೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ದೊಡ್ಡ ಜಯ

ಯುಡಿಎಫ್ (UDF) ಮೇಯರ್ ಅಭ್ಯರ್ಥಿ ಆಗಿದ್ದ ಕೆ.ಎಸ್ ಶಬರಿನಾಥನ್ 17 ಮತಗಳನ್ನ ಪಡೆದರೆ, ಎಲ್‌ಡಿಎಫ್ ಅಭ್ಯರ್ಥಿ ಆರ್‌ಪಿ ಶಿವಾಜಿ 29 ಮತಗಳನ್ನ ಗಳಿಸಿದ್ರು. ಬಳಿಕ ಯುಡಿಎಫ್ ಪರ ಚಲಾವಣೆಗೊಂಡಿದ್ದ 2 ಮತಗಳನ್ನ ಅಮಾನ್ಯವೆಂದು ಘೋಷಿಸಲಾಯಿತು.
ಫಲಿತಾಂಶ ಘೋಷಣೆಯ ಬಳಿಕ ರಾಜೇಶ್ ರಾಜ್ಯ ರಾಜಧಾನಿಯ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಹಾಜರಿದ್ದರು. ಇದನ್ನೂ ಓದಿ: 45 ವರ್ಷಗಳ ಎಲ್‌ಡಿಎಫ್ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್
ಬಿಜೆಪಿಗೆ ಕೇರಳದಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ನೆಲೆ ಇಲ್ಲ. ಇಲ್ಲಿನ ಚುನಾವಣೆಯಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಧ್ಯೆ ನೇರಾನೇರಾ ಸ್ಪರ್ಧೆ ನಡೆಯುತ್ತಿವೆ. ಆದರೆ ಈ ಬಾರಿ ತಿರುವನಂತಪುರಂದಲ್ಲಿ ಕಮಲ ಅರಳುವಲ್ಲಿ ಯಶಸ್ವಿಯಾಗಿದೆ. ತಿರುವನಂತಪುರಂ ನಗರಪಾಲಿಕೆ ಹೊರತುಪಡಿಸಿದ್ರೆ ಈ ಬಾರಿ ಕಾರ್ಪೊರೇಷನ್, ಪುರಸಭೆ, ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಯುಡಿಎಫ್ ಪ್ರಾಬಲ್ಯ ಸಾಧಿಸಿದೆ.

ಇನ್ನುಳಿದ ಕಾರ್ಪೋರೇಷನ್‌ಗಳ ಫಲಿತಾಂಶ
* ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 16, ಯುಡಿಎಫ್ 27, ಎನ್‌ಡಿಎ 12 ಸ್ಥಾನಗಳಲ್ಲಿ ಜಯಗಳಿಸಿದೆ.
* ಎರ್ನಾಕುಲಂ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 20, ಯುಡಿಎಫ್ 46, ಎನ್‌ಡಿಎ 6 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
* ತ್ರಿಶೂರ್ ಕಾರ್ಪೊರೇಷನ್‌ನಲ್ಲಿ ಯುಡಿಎಫ್ 33, ಎಲ್‌ಡಿಎಫ್ 11, ಎನ್‌ಡಿಎ 8.
* ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 34, ಯುಡಿಎಫ್ 26, ಎನ್‌ಡಿಎ 13.
* ಕಣ್ಣೂರು ಕಾರ್ಪೊರೇಷನ್‌ನಲ್ಲಿ ಎಲ್‌ಡಿಎಫ್ 15, ಯುಡಿಎಫ್ 36, ಎನ್‌ಡಿಎ 4, ಓರ್ವ ಸ್ವತಂತ್ರ ಅಭ್ಯರ್ಥಿಗೆ ಜಯ ಸಿಕ್ಕಿದೆ.
ಪುರಸಭೆಯಲ್ಲಿ ಯುಡಿಎಫ್‌ಗೆ ಅದ್ಭುತ ಜಯ
ಪುರಸಭೆಯ 86 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ 54, ಎಲ್‌ಡಿಎಫ್ 28, ಎನ್‌ಡಿಎ 2, ಇತರೆ ಓರ್ವ ಗೆಲುವು ಸಾಧಿಸಿದ್ದರೆ, 1 TIE ಗೆದ್ದಿದೆ.
ಗ್ರಾಪಂ ನಲ್ಲಿ ಯುಡಿಎ ದೊಡ್ಡ ಜಯ
941 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ 504, ಎಲ್‌ಡಿಎಫ್ 341, ಟಿಐಎ 64, ಎನ್‌ಡಿಎ 26 ಹಾಗೂ ಇತರ 6 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬ್ಲಾಕ್ ಚುನಾವಣೆಯಲ್ಲಿ ಯುಡಿಎಫ್ 79, ಎಲ್‌ಡಿಎಫ್ 63, ಟಿಐಇ 10 ಸ್ಥಾನಗಳಲ್ಲಿ ಜಯಭೇರಿ ಭಾರಿಸಿವೆ.

