ತಿರುವನಂತಪುರಂ: 6.3 ಕಿಲೋ ಮೀಟರ್ ಉದ್ದ ಮತ್ತು 27 ಸಾವಿರ ಕೆಜಿ ತೂಕದ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿ ಕೇರಳ ಬೇಕರ್ಸ್ ತಂಡ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಕೇರಳದ ತ್ರಿಶೂರ್‍ನಲ್ಲಿ ಬೇಕರ್ಸ್ ಅಸೋಸಿಯೇಷನ್ ಕೇರಳ (ಬಿಎಕೆಇ) ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 500 ಬೇಕರಿಗಳಿಂದ 1500 ಬೇಕರ್ಸ್‍ಗಳು ಮತ್ತು ಅಡುಗೆ ಮಾಡುವವರು ಸೇರಿ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿದ್ದಾರೆ. 12 ಸಾವಿರ ಕೆ.ಜಿ ಸಕ್ಕರೆ ಮತ್ತು ಹಿಟ್ಟನ್ನು ಬಳಸಿ ಈ ಕೇಕ್ ತಯಾರಿಸಲಾಗಿದೆ.
Advertisement
And the icing on the cake – a certificate presentation ???? pic.twitter.com/T9UJZsZdhz
— Guinness World Records (@GWR) January 15, 2020
Advertisement
ಕೇವಲ 4 ಗಂಟೆಗಳಲ್ಲಿ 1500 ಜನರ ಸೇರಿ, 10 ಸೆಂಟಿಮೀಟರ್ ಅಗಲ ಮತ್ತು ದಪ್ಪವಾದ ವೆನಿಲ್ಲಾ ಕೇಕ್ ಅನ್ನು ತಯಾರಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ವಿಶ್ವದ ಅತಿ ಉದ್ದವಾದ ಕೇಕ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಬೇಕರ್ಸ್ ಅಸೋಸಿಯೇಷನ್ ಕೇರಳದವರಿಗೆ ಧನ್ಯವಾದಗಳು ಎಂದು ಬರೆದುಕೊಂಡು, ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿದೆ.
Advertisement
Advertisement
ಈ ಹಿಂದೆ ಮೇ 2018 ರಲ್ಲಿ 3.18 ಕಿಲೋಮೀಟರ್ ಉದ್ದದ ಕೇಕ್ ಅನ್ನು ತಯಾರಿಸಿದ್ದ ಚೀನಾದ ಜಿಯಾಂಗ್ಕ್ಸಿ ಬೇಕರಿ ಅಸೋಸಿಯೇಷನ್ (ಚೀನಾ) ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿದ ದಾಖಲೆ ಮಾಡಿತ್ತು. ಈ ಕೇಕ್ ಅನ್ನು ಜಿಕ್ಸಿ ಬ್ರೆಡ್ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಉತ್ಸವದಲ್ಲಿ, 23 ಗಂಟೆಗಳ ಅವಧಿಯಲ್ಲಿ 60 ಬೇಕರ್ಸ್ ಗಳು ಮತ್ತು 120 ಸಹಾಯಕರು ಸೇರಿ ಕೇಕ್ ತಯಾರಿಸಿದ್ದರು. ಇಲ್ಲಿ ತಯಾರದ ಫ್ರೂಟ್‍ಕೇಕ್ 12.2 ಸೆಂಟಿಮೀಟರ್ ಎತ್ತರ ಮತ್ತು 10.4 ಸೆಂಟಿಮೀಟರ್ ಉದ್ದವಿತ್ತು. ಕಾರ್ಯಕ್ರಮದ ನಂತರ ಕೇಕ್ ಅನ್ನು ಪ್ರೇಕ್ಷಕರಿಗೆ ಮತ್ತು ದೂರದ ಹಳ್ಳಿಗಳ ಕುಟುಂಬಗಳಿಗೆ ವಿತರಿಸಲಾಗಿತ್ತು.