ತಿರುವನಂತಪುರಂ: ವಧುವೊಬ್ಬಳು (Bride) ಸಕತ್ ಉತ್ಸಾಹದಿಂದ ಚೆಂಡೆ ಬಡಿಯುತ್ತಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಕೇರಳದ (Kerala) ಗುರುವಾಯೂರು ದೇವಸ್ಥಾನದಲ್ಲಿ ನಡೆದ ಮದುವೆಯ (Marriage) ಸಂಭ್ರಮಕ್ಕೆ ಹತ್ತಾರು ಜನ ಸಾಕ್ಷಿಯಾಗಿದ್ದಾರೆ. ವಧುವಿನ ಅಪ್ಪ – ಅಮ್ಮ ಕುಟುಂಬಸ್ಥರು ಮಗಳ ಮದುವೆ ಎನ್ನುವ ಸಂತಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಶಾಸ್ತ್ರೋಕ್ತಗಳಲ್ಲಿ ಭಾಗಿಯಾಗಬೇಕಾದ ವಧು ಶಿಲ್ಪಾ, ಮಂಟಪಕ್ಕೆ ಬರುವ ವೇಳೆ ಚೆಂಡೆ ತಂಡದೊಂದಿಗೆ ಚೆಂಡೆಯನ್ನು ಬಡಿಯುತ್ತಾ, ಖುಷಿ ಖುಷಿಯಲ್ಲಿ ಚೆಂಡೆ ತಂಡದ ಸದಸ್ಯರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.
ಈ ವೇಳೆ ಇದರೊಂದಿಗೆ ವರ (Groom) ಹಾಗೂ ಚೆಂಡೆ ಮಾಸ್ಟರ್ ಆದ ವಧುವಿನ ತಂದೆಯೂ (Father) ಸಾಥ್ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
A marriage function in guruvayoor temple today. The brides dad is Chendai master and the daughter plays it enthusiastically with her dad also joining at the end. The groom also seems to be participating. pic.twitter.com/VgoQbIhwhh
— BRC-SBC (@LHBCoach) December 26, 2022
ವೀಡಿಯೋದಲ್ಲಿ ಏನಿದೆ?: ವಧು ಚೆಂಡೆಯನ್ನು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ಚೆಂಡೆ ವಾದಕರ ಗುಂಪು ಸಂತೋಷದಿಂದ ವಧುವಿಗೆ ಸಾಥ್ ನೀಡಿದ್ದಾರೆ. ಕೊನೆಯಲ್ಲಿ ವಧುವಿನ ತಂದೆಯೂ ಚೆಂಡೆ ವಾದಕರೊಂದಿಗೆ ಸೇರಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವರ ಕೂಡ ಭಾಗವಹಿಸುತ್ತಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಮಾಜಿ ಕೇಂದ್ರ ಸಚಿವ
ವಧು ಶಿಲ್ಪಾ ಅವರು ಚೆಂಡೆ ವಾದನದ ಅನುಭವಿ ಕಲಾವಿದೆ. ಹಲವಾರು ಚೆಂಡೆ ವಾದನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದವರು ಎಂದು ಮೂಲಗಳು ತಿಳಿಸಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು