ತಿರುವನಂತಪುರಂ: ಮೂರು ದಿನಗಳ ಹಿಂದೆ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಸ್ಫೋಟದ (Kerala Blasts) ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದ ಡೊಮಿನಿಕ್ ಮಾರ್ಟಿನ್ ಅಸಾಧಾರಣ ಬುದ್ಧಿವಂತ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿಯ ಜೀವನ, ವೃತ್ತಿ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಕೊಲ್ಲಿ ರಾಷ್ಟ್ರದಲ್ಲಿ (Gulf) ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಂದಿದ್ದ. ಅಸಾಧಾರಣ ಬುದ್ಧಿವಂತಿಕೆ ಮತ್ತು ಶ್ರದ್ಧೆಯ ವ್ಯಕ್ತಿ ಈತ. ಆಘಾತಕಾರಿ ಕೃತ್ಯಕ್ಕಾಗಿ ಒಳ್ಳೆ ಸಂಬಳದ ಕೆಲಸ ಬಿಟ್ಟು ಬಂದು ಬಾಂಬ್ ಸ್ಫೋಟಿಸಿದ್ಯಾಕೆ ಎಂಬುದು ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಆತನ ಪ್ರವೀಣತೆಯನ್ನು ಪೊಲೀಸರು ಗಮನಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
Advertisement
Advertisement
ಮಂಗಳವಾರ ವಿಶೇಷ ತನಿಖಾ ತಂಡ, ಮಾರ್ಟಿನ್‌ನನ್ನು ಆಲುವಾ ಬಳಿಯ ಅಥಣಿಯಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದಿದ್ದು ನಿರ್ಣಾಯಕ ಸಾಕ್ಷ್ಯಾಧಾರಗಳ ಅನ್ವೇಷಣೆ ನಡೆಸಿದೆ. ಆರೋಪಿ ಸ್ಫೋಟಕ ಸಾಧನೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
Advertisement
ಪ್ರಾರ್ಥನಾ ಸಭೆಯಲ್ಲಿ ಸಂಭವಿಸಿದೆ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಲ್ಲದೇ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟಕ್ಕೆ ಬಳಸಿದ ವಸ್ತುಗಳು ಯಾವುವು? ಸ್ಫೋಟಕ ಹೇಗೆ ತಯಾರಿಸಲಾಯಿತು ಎಂಬ ಬಗ್ಗೆ ಆರೋಪಿ ವಿವರಗಳನ್ನು ಪೊಲೀಸರಿಗೆ ನೀಡಿದ್ದಾನೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಲ್ಲಿ ಬಾಂಬ್ ಬ್ಲಾಸ್ಟ್- ಕೇರಳ ಸಿಎಂಗೆ ಅಮಿತ್ ಶಾ ಕರೆ
Advertisement
ಆರೋಪಿ ಮಾರ್ಟಿನ್ ಭಾನುವಾರ ಪೊಲೀಸರ ಮುಂದೆ ಶರಣಾದಾಗ, ತಾನು ಖರೀದಿಸಿದ ಸಾಮಗ್ರಿಗಳ ಬಿಲ್‌ಗಳನ್ನು ನೀಡಿದ್ದಾನೆ. ಇದು ಆತನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶದಲ್ಲಿ ಒಳ್ಳೆ ಕೆಲಸದಲ್ಲಿದ್ದ ಮಾರ್ಟಿನ್ ಸ್ಫೋಟದಲ್ಲಿ ಏಕೆ ಭಾಗಿಯಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ತನಿಖಾ ತಂಡವು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಪ್ರಕರಣ ಮುಂದುವರಿದಂತೆ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ಇದನ್ನೂ ಓದಿ: ಕೇರಳದ ಕಲಮಶ್ಯೇರಿಯಲ್ಲಿ ಬಾಂಬ್ ಸ್ಪೋಟ- ಓರ್ವ ದುರ್ಮರಣ
Web Stories