Kerala Bomb Blast: ಅತ್ತೆ ಕುಳಿತಿದ್ದ ಜಾಗ ತಪ್ಪಿಸಿ ಬಾಂಬ್ ಇಟ್ಟಿದ್ದೆ: ಆರೋಪಿ ಬಾಯ್ಬಿಟ್ಟ ಸತ್ಯವೇನು?

Public TV
1 Min Read
KERALA BOMB ACCUSED

ತಿರುವನಂತಪುರಂ: ಕೇರಳದ ಕಳಮಶ್ಶೇರಿಯಲ್ಲಿ (Kalamassery Kerala) ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲಿಸರು ಆರೋಪಿಯನ್ನು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ತನಿಖೆಯ ವೇಳೆ ಆರೋಪಿ ಡೊಮಿನಿಕ್ ಮಾರ್ಟಿನ್ (Dominic Martin) ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಝಮ್ರಾ ಕನ್ವೆನ್ಷನ್ ಸೆಂಟರ್‍ನ ಪ್ರಾರ್ಥನಾ ಮಂದಿರದಲ್ಲಿ ನನ್ನ ಅತ್ತೆಯೂ ಇದ್ದರು. ಹೀಗಾಗಿ ಅವರು ಕುಳಿತಿದ್ದ ಸ್ಥಳವನ್ನು ತಪ್ಪಿಸಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಕುರ್ಚಿಯ ಕೆಳಗಡೆ ಟಿಫನ್ ಬಾಕ್ಸ್ ಅಲ್ಲ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಬಾಂಬ್ ಇಟ್ಟಿದ್ದೆ. ಇನ್ನು ಬಾಂಬ್ ಬ್ಲಾಸ್ಟ್‌ ತೀವ್ರತೆ ಹೆಚ್ಚಾಗಲು ಪೆಟ್ರೋಲ್ (Petrol) ಕೂಡ ಬಳಕೆ ಮಾಡಿದ್ದೆ ಎಂದಿದ್ದಾನೆ. ಬಾಂಬ್ ಸ್ಫೋಟಗೊಂಡ ಬಳಿಕ ಮಾರ್ಟಿನ್ ತನ್ನ ಗೆಳೆಯನಿಗೆ ಕರೆ ಮಾಡಿದ್ದಾನೆ. ಯಾಕೆಂದರೆ ಈತ ಗೆಳೆಯನ ಜೊತೆ ಹಣಕಾಸಿನ ಡೀಲ್ ಇಟ್ಟುಕೊಂಡಿದ್ದ ಎಂಬುದು ಕೂಡ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಟಿನ್ ಗೆಳೆಯನಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

KERALA

ಒಟ್ಟಿನಲ್ಲಿ ಬಾಂಬ್ ಬ್ಲಾಸ್ಟ್ ಮುಂದಾಳತ್ವವನ್ನು ವಹಿಸಿರುವ ಮಾರ್ಟಿನ್, ತಾಂತ್ರಿಕ ವಿಷಯಗಳಲ್ಲಿ ಪರಿಣತ ಎಂದು ತನಿಖಾ ತಂಡ ತೀರ್ಮಾನಿಸಿದೆ. ಇನ್ನು ಘಟನೆಯಿಂದ ಎಚ್ಚೆತ್ತ ಸಿಎಂ, ಸೋಮವಾರ (ಇಂದು) ಸರ್ವಪಕ್ಷ ಸಭೆ ಕರೆದಿದ್ದು, ಮೀಟಿಂಗ್ ನಡೆಯುತ್ತಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಭಾನುವಾರ ಬೆಳಗ್ಗೆ ಕಳಮಶ್ಶೇರಿಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಬ್ಲಾಸ್ಟ್ ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬ್ಲಾಸ್ಟ್ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದು, ಸದ್ಯ ಈತನ ತನಿಖೆ ನಡೆಯುತ್ತಿದೆ.

Web Stories

Share This Article