ತಿರುವನಂತಪುರಂ: ಕೇರಳವು ಮಾತೃಭಾಷೆ ವಿಚಾರದಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಆದರೆ ಅಲ್ಲಿನ ವಿಧಾನಸಭೆಯಲ್ಲಿ ಇಂದು ಕನ್ನಡ ಕೇಳಿಬಂದಿದ್ದು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ಕೇರಳದ 5 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ನಡೆದ ಉಪ ಚುನಾವಣೆ ನಡೆಯಿತು. ಅಕ್ಟೋಬರ್ 24ರಂದು ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಇಂಡಿಯನ್ ಯುಬಿಯನ್ ಮುಸ್ಲಿಂ ಲೀಗ್ 1 ಕ್ಷೇತ್ರದಲ್ಲಿ ಜಯ ಗಳಿಸಿದೆ.
Advertisement
Advertisement
ಐದು ಜನ ನೂತನ ಶಾಸಕರು ಸೋಮವಾರ ಆರಂಭವಾದ ವಿಧಾನಸಭೆಯ ಕಲಾಪದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಂಜೇಶ್ವರ ಕ್ಷೇತ್ರದ ಶಾಸಕ ಎಂ.ಸಿ.ಖಮರುದ್ದೀನ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.
Advertisement
ಇಂಡಿಯನ್ ಯುಬಿಯನ್ ಮುಸ್ಲಿಂ ಲೀಗ್‍ನಿಂದ ಸ್ಪರ್ಧಿಸಿದ್ದ ಎಂ.ಸಿ.ಖಮರುದ್ದೀನ್ ಅವರು 7,923 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜೇತ ಖಮರುದ್ದೀನ್ 65,407 ಮತಗಳನ್ನು ಪಡೆದಿದ್ದರೆ, ಪರಾಜಿತ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಕುಂಟಾರ್ 57,484 ಮತಗಳನ್ನು ಗಳಿಸಿದ್ದಾರೆ.