ತಿರುವನಂತಪುರಂ: ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ವಿರೋಧಿಸಿ ಕೇರಳ ವಿಧಾನಸಭೆ (Kerala Assembly ಮಂಗಳವಾರ ಸರ್ವಾನುಮತದ ನಿರ್ಣಯವನ್ನು (Resolution) ಅಂಗೀಕರಿಸಿದೆ.
ಸದನದಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಯುಸಿಸಿ ಏಕಪಕ್ಷೀಯ ಮತ್ತು ಆತುರದ ಕ್ರಮ ಎಂದು ಟೀಕಿಸಿದರು.
ಫೆಬ್ರವರಿಯಲ್ಲಿ ಮಿಜೋರಾಂ ವಿಧಾನಸಭೆ ದೇಶದಲ್ಲಿ ಯುಸಿಸಿಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿತ್ತು. ಈಗ ಈ ಪಟ್ಟಿಗೆ ಎರಡನೇ ರಾಜ್ಯವಾಗಿ ಕೇರಳ ವಿಧಾನಸಭೆ ಸೇರ್ಪಡೆಯಾಗಿದೆ. ಸಿಎಂ ಮಂಡಿಸಿದ ನಿರ್ಣಯಕ್ಕೆ ಎಡ ಪ್ರಜಾಸತ್ತಾತ್ಮಕ ವೇದಿಕೆ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ವೇದಿಕೆಯ (UDF) ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
Today, the Kerala Assembly resoundingly passed a resolution against the Union Government's unilateral and hasty move to impose the #UniformCivilCode. The implementation of the UCC without engaging in democratic debate or seeking consensus poses a significant threat to the unity… pic.twitter.com/zFk4pn7fWH
— Pinarayi Vijayan (@pinarayivijayan) August 8, 2023
ಯುಸಿಸಿಯ ಪರವಾಗಿರುವ ಬಿಜೆಪಿ (BJP) ಯಾವೊಬ್ಬ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಇಲ್ಲ. ಹೀಗಾಗಿ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಇದನ್ನೂ ಓದಿ: ಇಡೀ ಭಾರತ ನನ್ನ ಮನೆ: ಬಂಗಲೆಗೆ ಮರಳಿದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ಇದು ಸಂವಿಧಾನದ (Constitution) ಪ್ರಕಾರ ಯುಸಿಸಿಯಲ್ಲ. ಸಂಘ ಪರಿವಾರದ ಹಿಂದೂ ಕಾನೂನು (Hindu Law) ಮನುಸ್ಮೃತಿಯನ್ನು ಆಧರಿಸಿದೆ. ಕೇಂದ್ರದ ಕ್ರಮ ಜಾತ್ಯಾತೀತ ಸ್ವರೂಪವನ್ನು ಕಸಿದುಕೊಳ್ಳುವ ಏಕಪಕ್ಷೀಯ ಮತ್ತು ಆತುರದ ನಿರ್ಧಾರವಾಗಿದೆ. ಸಂವಿಧಾನವು ಸಾಮಾನ್ಯ ನಾಗರಿಕ ಕಾನೂನನ್ನು ರಾಜ್ಯ ನಿರ್ದೇಶನ ತತ್ವವಾಗಿ ಮಾತ್ರ ಉಲ್ಲೇಖಿಸುತ್ತದೆ. ಆದರೆ ಅದನ್ನು ಕಡ್ಡಾಯ ಮಾಡಿಲ್ಲ ಎಂದು ವಿಜಯನ್ ಹೇಳಿದರು.
ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿಹಾಕುವ ಮೂಲಕ ‘ಒಂದು ರಾಷ್ಟ್ರ, ಒಂದು ಸಂಸ್ಕೃತಿ’ ಎಂಬ ಬಹುಸಂಖ್ಯಾತ ಕೋಮುವಾದಿ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಯುಸಿಸಿಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದಾಗ ಮತ್ತು ಧಾರ್ಮಿಕ ವೈಯಕ್ತಿಕ ನಿಯಮಗಳನ್ನು ಅನುಸರಿಸುವ ಮತ್ತು ಆಚರಿಸುವ ಹಕ್ಕನ್ನು ಒಳಗೊಂಡಿರುವಾಗ, ಯಾವುದೇ ಕಾನೂನನ್ನು ನಿಷೇಧಿಸುವುದು ಸಂವಿಧಾನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು.
ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿಯೂ ಸಹ ಯುಸಿಸಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿತ್ತು. ಬಿಆರ್ ಅಂಬೇಡ್ಕರ್ ಅವರ ಅಂದಿನ ನಿಲುವು ಸಂಸತ್ತು ಸಾಮಾನ್ಯ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸಬಹುದು ಎಂದು ಹೇಳಿದ್ದರೆ ಹೊರತು ಅದನ್ನು ಕಡ್ಡಾಯಗೊಳಿಸಬೇಕೆಂದು ಅವರು ಒತ್ತಾಯ ಮಾಡಿರಲಿಲ್ಲ ಎಂದು ಪಿಣರಾಯಿ ವಾದಿಸಿದರು.
ಭಾರತೀಯ ಕಾನೂನು ಆಯೋಗವು ಕಳೆದ ತಿಂಗಳು ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸುವ ಕುರಿತು ಸಲಹೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
Web Stories