ತಿರುವನಂತಪುರಂ: ಬಾಂಬ್ ಸ್ಫೋಟಗೊಂಡು ಅಸ್ಸಾಂನ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಫಸಲ್ ಹಕ್ ಹಾಗೂ ಪುತ್ರ ಶಹೀದುಲ್ ಮೃತ ಪಟ್ಟವರು. ಈ ಇಬ್ಬರು ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಈ ಗುಜರಿ ಸಂಗ್ರಹಿಸುವಾಗ ಸ್ಟೀಲ್ ಬಾಂಬ್ ದೊರೆತಿದೆ. ಆದರೆ ಅವರು ಈ ಸ್ಟೀಲ್ ಬಾಂಬ್‍ನ್ನು ಊಟದ ಬಾಕ್ಸ್ ಎಂದು ತೆರೆಯುತ್ತಿದ್ದಂತೆಯೇ ಅದು ಸ್ಫೋಟಗೊಂಡಿದೆ.
ಘಟನೆಯಲ್ಲಿ ಫಸಲ್ ಹಕ್ ಸ್ಥಳದಲ್ಲೇ ಮೃತಪಟ್ಟರೇ, ಅವರ ಪುತ್ರ ಶಹೀದುದಲ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಪೊಲೀಸರು ಅವರ ಬಳಿ ಹೇಗೆ ಬಾಂಬ್ ಬಂದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಧವ್‌ಗೆ ಮತ್ತೆ ಶಾಕ್ – ಶಿವಸೇನೆಯ 64 ಪಾಲಿಕೆ ಸದಸ್ಯರು ಶಿಂಧೆ ಬಣಕ್ಕೆ ಸೇರ್ಪಡೆ
ಈ ಹಿನ್ನೆಲೆಯಲ್ಲಿ ಮನೆಯ ಸುತ್ತಲಿನ ಎಲ್ಲಾ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. 5 ವಲಸೆ ಕಾರ್ಮಿಕರು ಮನೆಯಲ್ಲಿ ತಂಗಿದ್ದರು. ಘಟನೆ ನಡೆದಾಗ ಮೂವರು ಮನೆಯಲ್ಲಿರಲಿಲ್ಲ. ಇದನ್ನೂ ಓದಿ: ಬೋರಿಸ್ ಜಾನ್ಸನ್ ಬಳಿಕ ಯುಕೆ ಪಿಎಂ ಯಾರು? ಭಾರತ ಮೂಲದ ರಿಷಿಗಿದೆ ಚಾನ್ಸ್