ದೇವರ ಮೆರವಣಿಗೆ – ನಾಳೆ ಕೇರಳ ವಿಮಾನ ನಿಲ್ದಾಣ ಬಂದ್

Advertisements

ತಿರುವನಂತಪುರಂ: ಕೇರಳದ (Kerala) ತಿರುವನಂತಪುರಂ (Thiruvananthapuram) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Airport) ಐದು ಗಂಟೆಗಳ ಕಾಲ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

Advertisements

ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಾಟ್ಟು ಮೆರವಣಿಗೆಗೆ ನಡೆಯುವ ಹಿನ್ನೆಲೆಯಲ್ಲಿ ನ.1ರಂದು ವಿಮಾನ (Flight) ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ತಿಳಿಸಿದೆ.

Advertisements

ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್‍ವೇ ಮೂಲಕ ಪದ್ಮನಾಭ ಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆ ನಡೆಯಲಿದೆ. ಇದು ಶತಮಾನಗಳ ಹಿಂದಿನಿಂದ ನಡೆದು ಬಂದ ಆಚರಣೆ ಆಗಿದ್ದು, ಸುಗಮವಾಗಿ ಮುಂದುವರಿಸಲು ನ. 1ರಂದು 5 ಗಂಟೆಗಳ ಕಾಲ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

ವಿಮಾನ ನಿಲ್ದಾಣವು ಪ್ರತಿ ವರ್ಷ ಸಾಂಪ್ರದಾಯಿಕ ಆರಾಟ್ಟು ಮೆರವಣಿಗೆಯ ಸಮಯದಲ್ಲಿ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆ. ಈ ಮೆರವಣಿಗೆಯಲ್ಲಿ ವಿಷ್ಣುವಿನ ವಿಗ್ರಹವನ್ನು ತಿರುವನಂತಪುರಂನ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಶಂಕುಮುಖಂ ಬೀಚ್‍ಗೆ ಕೊಂಡೊಯ್ಯಲಾಗುತ್ತದೆ. ಇದನ್ನೂ ಓದಿ: ನ. 15ರವರೆಗೆ ಲೋಕಲ್, ಸೆಂಟ್ರಲ್‌ ಟ್ರೈನ್‌ಗಳಲ್ಲಿ ರೈಲ್‌ ನೀರ್‌ ಪೂರೈಕೆ ನಿಲ್ಲಿಸಿದ IRTC

Live Tv

Advertisements
Exit mobile version