ತಿರುವನಂತಪುರಂ: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಪತ್ತೆಯಾದ ಹಿನ್ನೆಲೆ ಮಲಯಾಳಿ ಕಿರುತೆರೆ ಧಾರಾವಾಹಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಕಿರುತೆರೆ ಧಾರಾವಾಹಿ ನಟಿ ಶ್ಯಾಮನಾಥ್ (Shamnath) ಅವರನ್ನು ಕೇರಳದ ಓಝಿವುಪರದಲ್ಲಿರುವ ಅವರ ನಿವಾಸದಿಂದ ಪರವೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಆಕೆಯ ಮನೆಯಲ್ಲಿ ಸರಿಸುಮಾರು ಎರಡು ಮಿಲಿಗ್ರಾಂಗಳಷ್ಟು ಮೆಥಿಲೆನೆಡಿಯೋಕ್ಸಿಫೆನೆಥೈಲಮೈನ್ (MDMA) ಪತ್ತೆಯಾಗಿದೆ. ಇದನ್ನೂ ಓದಿ: ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ನಟ ದುನಿಯಾ ವಿಜಯ್ ಭೇಟಿ
ಪೊಲೀಸ್ ಅಧಿಕಾರಿಗಳ ಪ್ರಕಾರ, ಶ್ಯಾಮನಾಥ್ ಅವರು ಕೆಲವು ದಿನಗಳಿಂದ ನಿಷೇಧಿತ ವಸ್ತುವನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ. ಆಕೆಗೆ ಡ್ರಗ್ಸ್ ಪೂರೈಸಿದವರ ಪತ್ತೆಗೆ ಸದ್ಯ ತನಿಖೆ ನಡೆಯುತ್ತಿದೆ.
ನಟಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಘಟನೆಗಳು ಮನರಂಜನಾ ಉದ್ಯಮದಲ್ಲಿ ಮಾದಕ ವ್ಯಸನದ ಬಗ್ಗೆ ಕಳವಳ ಉಂಟು ಮಾಡಿದೆ. ಇದನ್ನೂ ಓದಿ: ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ
ಸೆಲೆಬ್ರಿಟಿಯೊಬ್ಬರು ಮಾದಕ ವಸ್ತು ಹೊಂದಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುತ್ತಿರುವ ಮೊದಲ ನಿದರ್ಶನವಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ 2022 ರಲ್ಲಿ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಆದರೆ ಪ್ರಕರಣದಲ್ಲಿ ಆರ್ಯನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕ್ಲೀನ್‌ಚಿಟ್ ನೀಡಿದೆ. 24 ವರ್ಷದ ಯುವಕ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 22 ದಿನಗಳನ್ನು ಕಳೆದಿದ್ದ.